ಕಳವುಗೈದು ಸಾಗಿಸುತ್ತಿದ್ದ ಸ್ಕೂಟರ್ ಅಪಘಾತ; ಆರೋಪಿ ಬಂಧನ
ಕಾಸರಗೋಡು: ಕಳವುಗೈದು ಸಾಗಿಸುತ್ತಿದ್ದ ಸ್ಕೂಟರ್ ಅಪಘಾತಕ್ಕೊ ಳಗಾಗಿ, ಅದನ್ನು ಚಲಾಯಿಸಿದ ಆರೋಪಿ ಪೊಲೀಸರ ಸೆರೆಗೊಳಗದ ಘಟನೆ ನಡೆದಿದೆ. ಪೆರಿಂಙೊಮ್ ಕೊರಂಙಡ್ ನಿವಾಸಿ ಫಾಸಿಲ್ (೨೬) ಬಂಧಿತನಾದ ಆರೋಪಿ. ತೃಕ್ಕರಿಪುರ ಒಳವರದ ಕೆ. ವಿಜಯನ್ ಎಂಬವರ ಸ್ಕೂಟರ್ ತೃಕ್ಕರಿಪುರದ ಕೆ.ವಿ. ಹಾರ್ಡ್‌ವೇರ್ಸ್ ಬಳಿಯಿಂದ ಕಳೆದ ಡಿಸೆಂಬರ್‌ನಲ್ಲಿ ಕಳವುಗೈಯ್ಯಲ್ಪಟ್ಟಿತ್ತು. ಈ ಬಗ್ಗೆ ನೀಡಲಾದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಮಧ್ಯೆ ಕಳೆದ ವರ್ಷ ಡಿಸೆಂಬರ್ ಕೊನೆವಾರದಲ್ಲಿ ಮಲಪ್ಪುರಂ ಕಲ್ಲಂಜೇರಿಯಲ್ಲಿ ಆ ಸ್ಕೂಟರ್ ಅಪಘಾತಕ್ಕೀಡಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಕೂಟರ್‌ಗೆ ಅಳವಡಿಸಲಾಗಿದ್ದ ರಿಜಿಸ್ಟ್ರೇಷನ್ ನಂಬ್ರ ನಕಲಿಯಾಗಿತ್ತೆಂಬುವುದು ಸ್ಪಷ್ಟಗೊಂಡಿತ್ತು. ಈ ಬಗ್ಗೆ ಪೊಲೀಸರು ಇನ್ನಷ್ಟು ಹೆಚ್ಚಿನ ತನಿಖೆ ನಡೆಸಿದಾಗ ಸ್ಕೂಟರ್ ತೃಕ್ಕರಿಪುರದಿಂದ ಕದ್ದ ವಾಹನವಾಗಿತ್ತೆಂದು ಸ್ಪಷ್ಟಗೊಂಡಿತ್ತು. ಅದರಂತೆ ಸ್ಕೂಟರ್ ಚಲಾಯಿಸಿದ ಫಾಸಿಲ್‌ನನ್ನು ಪೊಲೀಸರು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು. ಬಂಧಿತನನ್ನು ಹೊಸದುರ್ಗಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನಲ್ಲಿರಿಸಲಾಗಿದೆ.