ಕಳವುಹೋದ ಸುಪ್ರಿಂಕೋರ್ಟ್ ನ್ಯಾಯಾಧೀಶರ ಕಾರು ಹರಿಯಾಣದಲ್ಲಿ ಪತ್ತೆ
ದೆಹಲಿ: ರಾಜಸ್ಥಾನದಿಂದ ಕಳವುಗೈದ ಸುಪ್ರಿಂಕೋರ್ಟ್ ನ್ಯಾಯಾಧೀಶರ ವಾಹನವನ್ನು ಹರಿಯಾಣದಿಂದ ಪತ್ತೆಹಚ್ಚ ಲಾಗಿದೆ. ಶನಿವಾರ ರಾತ್ರಿ ವಾಹನವನ್ನು ಜೈಪುರದಿಂದ ಕಳವುಗೈಯ್ಯಲಾಗಿದೆ. ಕಳವು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಅಧಿಕಾರಿಗಳ ತಂಡ ತನಿಖೆ ಆರಂಭಿಸಿತ್ತು. ಕಳವುಗೈದ ವಾಹನ ರಾಜ ಸ್ಥಾನದ ನಿಮ್ರಾಣ ಎಂಬ ಸ್ಥಳದಲ್ಲಿ ಇದೆ ಎಂದು ತನಿಖೆಯಿಂದ ಪೊಲೀಸರಿಗೆ ತಿಳಿದು ಬಂದಿದೆ. ಬಳಿಕ ದೆಹಲಿ ಪೊಲೀಸರು ಅಲ್ಲಿಗೆ ತೆರಳಿದರೂ ವಾಹನವನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ೧೦೦ರಷ್ಟು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ವಾಹನ ಹರಿಯಾಣದ ಬಿವಾನಿಯಲ್ಲಿದೆ ಎಂಬುದನ್ನು ಪತ್ತೆಹಚ್ಚಿದರು.