ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಹಿಂತಿರುಗಿಸಿದ ಸೈಬರ್ ಪೊಲೀಸ್
ಕಾಸರಗೋಡು: ವಿವಿಧ ಸನ್ನಿವೇಶಗಳಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಕಾಸರಗೋಡು ಸೈಬರ್ ಪೊಲೀಸರು ಹಿಂತಿರುಗಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ ಸಿ.ಎಂ. ದೇವದಾಸನ್, ಡಿವೈಎಸ್‌ಪಿ ಟಿ. ಉತ್ತಮ್‌ದಾಸ್ ಎಂಬಿವರ ಉಪಸ್ಥಿತಿಯಲ್ಲಿ ಕಳೆದು ಹೋಗಿದ್ದ ಆರು ಮೊಬೈಲ್ ಫೋನ್‌ಗಳನ್ನು ವಾಪಸು ನೀಡಲಾಗಿದೆ. ಕಳೆದು ಹೋದವುಗಳಲ್ಲಿ ಅನ್ಯರಾಜ್ಯದವರ ಮೊಬೈಲ್ ಫೋನ್‌ಗಳು ಹೆಚ್ಚಾ ಗಿತ್ತು. ಸೆಕೆಂಡ್ ಹ್ಯಾಂಡ್ ಮೊಬೈಲ್‌ಗಳು ಇವುಗಳಲ್ಲಿ ಒಳಗೊಂಡಿತ್ತು. ಸೈಬರ್ ಪೊಲೀಸ್ ಠಾಣೆಯ ಎಸ್‌ಐ ಪಿ.ಕೆ. ಅಜಿತ್, ಸಿವಿಲ್ ಪೊಲೀಸ್ ಆಫೀಸರ್ ವಿ. ಸಜೇಶ್ ಎಂಬಿವರ ತಂಡ ಮೊಬೈಲ್‌ಗಳನ್ನು ಪತ್ತೆಹಚ್ಚಿದೆ.