ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ ಬೀದಿ ನಾಯಿ ಕಡಿತಕ್ಕೊಳಗಾಗಿ ಸಾವನ್ನಪ್ಪಿದ್ದು 42 ಮಂದಿ

ಕಾಸರಗೋಡು:  ಕಳೆದ ನಾಲ್ಕು ವರ್ಷಗಳಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿ ರಾಜ್ಯದಲ್ಲಿ 42 ಮಂದಿ ಸಾವನ್ನಪ್ಪಿದ್ದಾರೆ. 2020ರ ಜನವರಿ 1ರಿಂದ 2024 ಜನವರಿ 30ರ ತನಕದ ಆರೋಗ್ಯ ಇಲಾಖೆಯ ಲೆಕ್ಕಾಚಾರ ಇದಾಗಿದೆ. ಈ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ಒಟ್ಟು 10  ಲಕ್ಷದಷ್ಟು ಮಂದಿ ನಾಯಿಗಳ ಕಡಿತಕ್ಕೊಳಗಾಗಿದ್ದಾರೆ.

ಕೋವಿಡ್ ಮಹಾಮಾರಿ ಹರಡ ತೊಡಗಿದಾಗ ದೇಶದಲ್ಲಿ  ಜ್ಯಾರಿ ಗೊಳಿಸಲಾದ ಮೊದಲನೇ ಲಾಕ್ ಡೌನ್ ತೆರವುಗೊಂಡ ಬಳಿಕ ರಾಜ್ಯದಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಉಂಟಾಗಿದೆ ಎಂದು ಲೆಕ್ಕಾಚಾರಗಳು ಸೂಚಿಸುತ್ತಿವೆ. ಮನೆಗಳ ತ್ಯಾಜ್ಯವನ್ನು ರಸ್ತೆ ಮತ್ತು ಬೀದಿಗೆಸೆಯುತ್ತಿರುವುದು, ಹೋಟೆಲ್‌ಗಳ ಆಹಾರವನ್ನು, ವಾಹನಗಳಲ್ಲಿ  ಕುಳಿತು ಸೇವಿಸಿದ ಬಳಿಕ  ಉಳಿದ ಆಹಾರವನ್ನು ರಸ್ತೆ ಬದಿಗೆಸೆಯುತ್ತಿರುವುದು, ಕೆಲವು ಮನೆಗಳಲ್ಲಿ ಮತ್ತು ಹಾಲ್‌ಗಳಲ್ಲಿ ಔತಣಕೂಟಗಳ ತ್ಯಾಜ್ಯವನ್ನು ರಾತ್ರಿ ವೇಳೆ  ರಸ್ತೆ ಬದಿ ನಿರ್ಜನ ಹಿತ್ತಿಲು ಮತ್ತು ಬೀದಿಗಳಲ್ಲಿ ಎಸೆಯುತ್ತಿರು ವುದು ಬೀದಿ ನಾಯಿಗಳ ಉಪಟ ಳವೂ ಹೆಚ್ಚಾಗಲು ಪ್ರಧಾನ ಕಾರಣ ವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆಹಾರ ಮತ್ತಿತರ ತ್ಯಾಜ್ಯವನ್ನು ರಸ್ತೆ ಬದಿ, ಹಿತ್ತಿಲುಗಳಲ್ಲಿ ತಂದೆಸೆಯು ವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ  ಕಾನೂನು ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page