ಕಳೆದ ವರ್ಷ ರಾಜ್ಯದ ಆಂತರಿಕ ವಿದ್ಯುತ್ ಉತ್ಪಾದನೆ 6504.28 ದಶಲಕ್ಷ ಯೂನಿಟ್


ಕಾಸರಗೋಡು: 2023-24ನೇ ಆರ್ಥಿಕ ವರ್ಷ ರಾಜ್ಯದಲ್ಲಿ ಆಂತರಿಕವಾಗಿ ಒಟ್ಟು 6504.28 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ರಾಜ್ಯ ವಿದ್ಯುತ್ ಇಲಾಖೆ ಪ್ರಕಟಿಸಿದ ವರದಿಯಲ್ಲಿ ಈ ಲೆಕ್ಕಾಚಾರ ನೀಡಲಾಗಿದೆ. ಇನ್ನು ಕಳೆದ ಆರ್ಥಿಕ ವರ್ಷ 23,923 ದಶಲಕ್ಷ ಯೂನಿಟ್ ವಿದ್ಯುತ್ನ್ನು ಹೊರಗಿನಿಂದ ಖರೀದಿಸಲಾಗಿದೆ. ಜಲವಿದ್ಯುತ್ ಯೋಜನೆಗಳ ಅಣೆಕಟ್ಟುಗಳನ್ನು ಪ್ರವಾಸಿ ಕೇಂದ್ರಗಳ ನ್ನಾಗಿಸಿದ ಕ್ರಮದಿಂದ ವಿದ್ಯುತ್ ಇಲಾಖೆಗೆ 7.97 ಕೋಟಿ ರೂ.ಗಳ ಆದಾಯ ಲಭಿಸಿದೆಯೆಂದು ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page