ಕಳ್ಳನೋಟು ಪ್ರಕರಣ: ಪಡನ್ನ ನಿವಾಸಿಗಳಾದ ಮತ್ತಿಬ್ಬರ ಬಂಧನ
ಕಣ್ಣೂರು: ಕಣ್ಣೂರಿನಲ್ಲಿ ನಡೆದ ಕಳ್ಳನೋಟು ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿಗಳಾದ ಮತ್ತಿ ಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪಡನ್ನ ತೆಕ್ಕೇಪುರದ ಈತಾಲ ಯದ ಹಾರಿಸ್ (38), ಎಡಚ್ಚಾಕೈ ಮುಬಾರಕ್ ವಿಲ್ಲಾದ ಫಿರೋಸ್ (57) ಎಂಬಿವರನ್ನು ಕಣ್ಣೂರು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ
ಚಂದೇರ ಠಾಣೆ ಪೊಲೀಸರ ಸಹಾಯದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ. ಪಯ್ಯನ್ನೂರು ಕಂಡೋತ್ ಎಂಬಲ್ಲಿನ ನಿವಾಸಿಯೂ ಚೆರುವತ್ತೂರಿನಲ್ಲಿ ಮೆಕ್ಯಾನಿಕ್ ಆಗಿರುವ ಶಿಜು ಎಂಬಾತನನ್ನು ಪೊಲೀಸರು ಮೊದಲು ಸೆರೆಹಿಡಿದಿದ್ದರು. ಬಾರ್‌ನಲ್ಲಿ ಮದ್ಯ ಸೇವಿಸಿದ ಬಳಿಕ ಶಿಜು 500 ರೂಪಾಯಿಯ ನೋಟನ್ನು ನೀಡಿದ್ದನು. ಆ ನೋಟು ಕಳ್ಳನೋಟಾಗಿದೆಯೆಂದು ತಿಳಿದು ಬಾರ್ ನೌಕರರು ನೀಡಿದ ದೂರಿನಂತೆ ಶಿಜುವನ್ನು ಬಂಧಿಸಲಾಗಿತ್ತು. ಬಳಿಕ ಶಿಜುವನ್ನು ತನಿಖೆಗೊಳಪಡಿಸಿದಾಗ ಲಭಿಸಿದ ಸೂಚನೆ ಮೇರೆಗೆ ಪಡನ್ನದಲ್ಲಿ ಡ್ರೈವಿಂಗ್ ಸ್ಕೂಲ್ ಮಾಲಕಿಯಾದ ಪಾಡಿಯೋಟುಚಾಲ್‌ನ ಪಿ.ಪಿ. ಶೋಭಾಳನ್ನು ಬಂಧಿಸಲಾಗಿದೆ. ಆಕೆಯನ್ನು ತನಿಖೆಗೊಳಪಡಿಸಿದಾಗ ಹಾರಿಸ್ ಹಾಗೂ ಫಿರೋಸ್ ಎಂಬಿವರ ಕುರಿತಾಗಿ ಮಾಹಿತಿ ಲಭಿಸಿತ್ತು.
ಕಳ್ಳನೋಟುಗಳು ಈ ಆರೋಪಿ ಗಳ ಕೈಗೆ ಹೇಗೆ, ಎಲ್ಲಿಂದ ತಲುಪಿದೆ ಎಂಬ ಕುರಿತು ತನಿಖ ನಡೆಯುತ್ತಿದೆ. ಪ್ರಕರಣದಲ್ಲಿ ಈಗಾಗಲೇ ನಾಲ್ಕು ಮಂದಿ ಸೆರೆಗೀಡಾಗಿದ್ದು ಈ ಹಿನ್ನೆಲೆಯಲ್ಲಿ ಈ ದಂಧೆಯಲ್ಲಿ ಇನ್ನಷ್ಟು ಆರೋಪಿಗಳಿರಬಹುದೆಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.