ಕಾಂಗ್ರೆಸ್ ತೊರೆದ ಮಂಡಲ ಮಾಜಿ ಅಧ್ಯಕ್ಷ ಮೊಯ್ದೀನ್ ಕುಂಞಿ ಬಿಜೆಪಿಗೆ

ಹೊಸದುರ್ಗ: ಕಾಂಗ್ರೆಸ್ ಮಡಿಕೈ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಯುಡಿಎಫ್ ಚುನಾವಣೆ ಸಮಿತಿ ಸಂಚಾಲಕರಾಗಿರುವ ಬಂಗಳ ನಿವಾಸಿ ಎ. ಮೊಯ್ದೀನ್ ಕುಂಞಿ ಬಿಜೆಪಿಗೆ ಸೇರಿದ್ದಾರೆ. ವಾಳಕ್ಕೋಡ್‌ನಲ್ಲಿ ನಡೆದ ಎನ್‌ಡಿಎ ಕಾಞಂಗಾಡ್ ಮಂಡಲ ಸಮಾವೇಶದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿಕುಂಟಾರು ಇವರಿಗೆ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು.  ಇತ್ತೀಚಿನವರೆಗೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರಿಗಾಗಿ ಮತ ಯಾಚಿಸಿದರು. ಒಂದು ತಿಂಗಳ ಹಿಂದೆ ವರೆಗೆ ಮಂಡಲ ಅಧ್ಯಕ್ಷರಾಗಿ ದ್ದರು. ಆದರೆ ಸಮರಾಗ್ನಿ ಯಾತ್ರೆಗೆ ಫಂಡ್ ಸಂಗ್ರಹಿಸಿ ನೀಡಿಲ್ಲವೆಂಬ ಕಾರಣದಿಂ ದ  ಮಂಡಲ ಅಧ್ಯಕ್ಷ ಸ್ಥಾನದಿಂದ ಮೊಯ್ದೀನ್ ಕುಂಞಿಯ ವರನ್ನು ಅಮಾನತು ಮಾಡಲಾಗಿತ್ತು. ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್‌ನಲ್ಲಿ ದುಡಿದ ತನಗೆ ಅವಗಣನೆ ಮಾತ್ರ ಲಭಿಸಿದ್ದೆಂದು ಆರೋಪಿಸಿ ಬಿಜೆಪಿಗೆ ಸೇರಲು ತೀರ್ಮಾನಿಸಿರುವು ದಾಗಿ ಅವರು ತಿಳಿಸಿದ್ದಾರೆ.

You cannot copy contents of this page