ಕಾಂಗ್ರೆಸ್ ನೇತಾರ ಕುಂಟಾರು ಬಾಲನ್ ಕೊಲೆ ಪ್ರಕರಣ : ಒಂದನೇ ಆರೋಪಿ ತಪ್ಪಿತಸ್ಥ ; ಇತರ ಆರೋಪಿಗಳ ಖುಲಾಸೆ

ಕಾಸರಗೋಡು: ಕಾಂಗ್ರೆಸ್‌ನ ಕಾರಡ್ಕ ಮಂಡಲ ಪ್ರಧಾನ ಕಾರ್ಯ ದರ್ಶಿಯಾಗಿದ್ದ ಕುಂಟಾರಿನ ಟಿ. ಬಾಲಕೃಷ್ಣನ್ ಅಲಿಯಾಸ್ ಕುಂಟಾರು ಬಾಲನ್ (೪೫)ರನ್ನು ಕೊಲೆಗೈದ ಪ್ರಕರಣದ ಒಂದನೇ ಆರೋಪಿ ಕುಂಟಾರು ನಿವಾಸಿ  ಒ.ಬಿ. ರಾಧ (ವಿ. ರಾಧಾಕೃಷ್ಣನ್ ೪೭) ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತು ಗೊಂಡಿದ್ದು.  ಆ ಹಿನ್ನೆಲೆಯಲ್ಲಿ ಆತ ತಪ್ಪಿತಸ್ಥನೆಂದು ವಿಚಾರಣಾ ನ್ಯಾಯಾಲಯವಾಗಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಪಿ. ಪ್ರಿಯಾ ತೀರ್ಪು ನೀಡಿದ್ದಾರೆ. ಶಿಕ್ಷಾ ಪ್ರಮಾಣವನ್ನು  ನ್ಯಾಯಾಲಯ ಇಂದು ಘೋಷಿಸಲಿದೆ.

ಇದೇ ಪ್ರಕರಣದ ಇತರ ಆರೋ ಪಿಗಳಾದ ಆದೂರು ಕಟ್ಟತ್ತಬೈಲಿನ ವಿಜಯನ್ (42), ಕುಂಟಾರಿನ ಕೆ. ಕುಮಾರನ್ (51) ಮತ್ತು ಕುಂಟಾರು ಅತ್ತನಾಡಿ ಹೌಸ್‌ನ  ಕೆ. ದಿಲೀಪ್ ಕುಮಾರ್ (41) ಎಂಬವರ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತು ಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

2008 ಮಾರ್ಚ್ 27ರಂದು ರಾತ್ರಿ ೭ಕ್ಕೆ ಕುಂಟಾರು ಬಾಲನ್ ತಮ್ಮ ಸ್ನೇಹಿತರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಾರಿ ಮಧ್ಯೆ ಕುಂಟಾರು ಬಸ್ ತಂಗುದಾಣದ ಬಳಿ ಅವರನ್ನು ಅಕ್ರಮಿಗಳ ತಂಡ ಕಾರಿನಿಂದ  ಹೊರಗೆ ಎಳೆದು ಹಾಕಿ ಇರಿದು ಕೊಲೆಗೈದಿ ತ್ತೆಂದು ಆದೂರು ಪೊಲೀಸರು ದಾಖ ಲಿಸಿದ ಪ್ರಕರಣದಲ್ಲಿ ಆರೋಪಿಸಲಾಗಿತ್ತು.

ಈ ಕೊಲೆ ಪ್ರಕರಣದ ತನಿಖೆ ಯನ್ನು ಬುಡಮೇಲು ಗೊಳಿಸಲಾಗುತ್ತಿ ದೆಯೆಂದು ದೂರಿ ಕುಂಟಾರು ಬಾಲನ್‌ರ ಕುಟುಂಬ ದವರು ಬಳಿಕ ಪ್ರತಿಭಟನೆ  ನಡೆಸಿದ್ದರು.  ಆದ್ದರಿಂದ ಈ ಪ್ರಕರಣದ ತನಿಖೆಯನ್ನು ನಂತರ ಕ್ರೈಂ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸ ಲಾಗಿತ್ತು. ಅನಂತರ ಈ ಪ್ರಕರಣದ ತನಿಖೆಯ ನ್ನು ಸಿಬಿಐಗೆ ಹಸ್ತಾಂತರಿಸಲು ತೀ ರ್ಮಾನಿಸಲಾಗಿತ್ತಾದರೂ,   ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಸಿಬಿಐ ತನಿಖೆ ಕೈಗೆತ್ತಿಕೊಂಡರಲಿಲ್ಲ. ಇದರಿಂದಾಗಿ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ಮುಂದುವರಿಸಿ

You cannot copy contents of this page