ಕಾಂಗ್ರೆಸ್ ಮಂಡಲ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆಬದಿಯಡ್ಕಕ್ಕೆ ಶ್ಯಾಮ್ ಪ್ರಸಾದ್ ಮಾನ್ಯ
ಕಾಸರಗೋಡು: ಜಿಲ್ಲೆಯಲ್ಲಿ ಕಾಂಗ್ರೆಸ್ ಮಂಡಲ ಸಮಿತಿಗಳಿಗೆ ನೂತನ ಅಧ್ಯಕ್ಷರುಗಳನ್ನು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ನೇಮಿಸಿದ್ದಾರೆ. ಇದರಂತೆ ಬದಿಯಡ್ಕ ಮಂಡಲಾಧ್ಯಕ್ಷರಾಗಿ ಶ್ಯಾಮ್ ಪ್ರಸಾದ್ ಮಾನ್ಯ ಅವರನ್ನು ನೇಮಿಸಲಾಗಿದೆ. ಕುಂಬ್ಡಾಜೆ ಮಂಡಲಕ್ಕೆ ಜೋನಿ ಕ್ರಾಸ್ತ, ಬೆಳ್ಳೂರು ಮಂಡಲಕ್ಕೆ ರಾಘವನ್ ಬೆಳೇರಿ, ಕಾರಡ್ಕಕ್ಕೆ ಕೆ. ಪುರುಷೋತ್ತಮ ಅವರನ್ನು ನೇಮಿಸಲಾಗಿದೆ. ಬದಿಯಡ್ಕ ಮಂಡಲ ಅಧ್ಯಕ್ಷರಾಗಿ ನೇಮಕಗೊಂಡ ಶ್ಯಾಮ್ ಪ್ರಸಾದ್ ಮಾನ್ಯ ಅವರು ಕಳೆದ ಹಲವಾರು ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ವಾರ್ಡ್ ಮಟ್ಟದ ಸಮಿತಿ, ಯೂತ್ ಕಾಂಗ್ರೆಸ್ ಬದಿಯಡ್ಕ ಮಂಡಲ ಅಧ್ಯಕ್ಷ, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ, ಕಾರಡ್ಕ ಬ್ಲಾಕ್ ಕಾಂಗ್ರೆಸ್ ಸಮಿತಿ, ಬದಿಯಡ್ಕ ಮಂಡಲ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೧೨ ವರ್ಷಗಳಿಂದ ಬದಿಯಡ್ಕ ಪಂಚಾಯತ್ ಸದಸ್ಯನಾಗಿರುವ ಅವರು ಈ ಹಿಂದೆ ಪಂಚಾಯತ್ ಆರೋಗ್ಯ, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕರ್ತರಾಗಿಯೂ ಕಾರ್ಯಾಚರಿಸುತ್ತಿದ್ದಾರೆ.