ಕಾಂಗ್ರೆಸ್ ಮುಖಂಡ ಹಮೀದ್ ಕೋಡಿಯಡ್ಕ ನಿಧನ
ಉಪ್ಪಳ: ಹಿರಿಯ ಕಾಂಗ್ರೆಸ್ ಮುಖಂಡ ಅಟ್ಟೆಗೋಳಿ ಜುಮಾ ಮಸೀದಿ ಮಾಜಿ ಅಧ್ಯಕ್ಷ ಹಮೀದ್ ಕೋಡಿಯಡ್ಕ (75) ನಿಧನರಾದರು. ಮೊನ್ನೆ ರಾತ್ರಿ ಮನೆಯಲ್ಲಿ ಹೃದಯಾಘಾತ ಉಂಟಾಗಿದ್ದು, ಉಪ್ಪಳದ ಆಸ್ಪತಗೆ ಸಾಗಿಸುವ ಮಧ್ಯೆ ನಿಧನಹೊಂದಿದರು. ಇವರು ಚೆನ್ನೈ, ಶಿವಮೊಗ್ಗ, ಮೈಸೂರು ಮೊದಲಾದ ಪೇಪರ್ ತಯಾರಿ ಘಟಕದಲ್ಲಿ ಇಂಜಿನಿಯರ್ ಆಗಿ ನಿವೃತ್ತಿ ಹೊಂದಿದ್ದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ, ಮಾಜಿ ಜಿಲ್ಲಾಧ್ಯಕ್ಷರಾಗಿದ್ದರು.
ಮೃತರು ಪತ್ನಿ ನೆಬೀಸ, ಮಕ್ಕಳಾದ ಆರೀಫ್, ನೆಜೀಮು, ಹರ್ಷಾದ್, ಸೊಸೆಯಂದಿರಾದ ವಿಶ್ವಧಿ, ನೌದಿನ್, ಅಳಿಯ ಯೂಸಫ್, ಸಹೋದರಿ ಬೀಬಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಹೋದರರಾದ ಕೋಡಿಯಡ್ಕ ಅಬ್ದುಲ್ ಮಾಸ್ತರ್, ಅಬ್ದುಲ್ ರಹಿಮಾನ್, ಶೇಖಾಲಿ, ಸಹೋದರಿಯರಾದ ಮರಿಯುಮ್ಮ, ಮೋಳು ಈ ಹಿಂದೆ ನಿಧನರಾಗಿದ್ದಾರೆ.
ಮೃತರ ಮನೆಗೆ ಕಾಂಗ್ರೆಸ್ ಮುಖಂಡರಾದ ಹಕೀಂ ಕುನ್ನಿಲ್, ಸುಂದರ ಆರಿಕ್ಕಾಡಿ, ಹರ್ಷಾದ್ ವರ್ಕಾಡಿ, ಸತ್ಯನ್ ಸಿ. ಉಪ್ಪಳ, ದಾಮೋದರನ್ ಮಾಸ್ತರ್, ವಸಂತ ಮಾಸ್ತರ್, ನಾರಾಯಣ ಏದಾರ್, ರಾಘವೇಂದ್ರ ಭಟ್, ಪೀಟರ್ ಡಿ’ಸೋಜಾ, ಮಹಮ್ಮದ್ ಜೋಡುಕಲ್ಲು, ಶಾಜಿ ಜೋಡುಕಲ್ಲು, ಎಡ್ವರ್ಡ್ ಡಿ’ಸೋಜಾ, ವಿನ್ಸಿ ಜೋಡುಕಲ್ಲು, ಹಂಝ ಅಟ್ಟೆಗೋಳಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಸಂತಾಪ ಸೂಚಿಸಿದೆ.