ಕಾಂಗ್ರೆಸ್ ಹಿರಿಯ ಮುಖಂಡ ಶೂರನಾಡ್ ನಿಧನ

ಕೊಚ್ಚಿ: ಹಿರಿಯ ಕಾಂಗ್ರೆಸ್ ಮುಖಂಡ ಡಾ. ಶೂರನಾಡ್ ರಾಜಶೇಖರನ್ (76) ನಿಧನ ಹೊಂದಿದರು. ಅಸೌಖ್ಯ ತಗಲಿ ಹಲವು ಕಾಲದಿಂದ ಚಿಕಿತ್ಸೆಯಲ್ಲಿದ್ದರು. ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನ ಸಂಭವಿಸಿದೆ. ಕೆಪಿಸಿಸಿ ನಿರ್ವಾಹಕ ಸಮಿತಿ ಸದಸ್ಯನಾಗಿದ್ದಾರೆ. ಕೊಲ್ಲಂನ ಶೂರನಾಡ್‌ನಲ್ಲಿ ಜನಿಸಿದ ಇವರು ಕೇರಳ ವಿದ್ಯಾರ್ಥಿ ಯೂನಿಯನ್ ಕಾರ್ಯಕರ್ತರಾಗಿ ರಾಜಕೀಯರಂಗ ಪ್ರವೇಶಿಸಿದ್ದರು. ಬಳಿಕ ಕೆಎಸ್‌ಯು, ಯೂತ್ ಕಾಂಗ್ರೆಸ್, ಕೊಲ್ಲಂ ಡಿಸಿಸಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೊದಲಾದ ಹುದ್ದೆಗಳನ್ನು ನಿಭಾಯಿಸಿದ್ದರು. ರಾಜ್ಯ ಸಭೆಗೆ, ಸಂಸತ್ತಿಗೆ, ವಿಧಾನಸಭೆಗೆ ಒಂದೊಂದು ಬಾರಿ ಸ್ಪರ್ಧಿಸಿದ್ದಾರೆ. ಪ್ರಸ್ತುತ ವೀಕ್ಷಣಂ ದಿನಪತ್ರಿಕೆಯ  ಮೆನೇಜಿಂಗ್ ಎಡಿಟರ್ ಆಗಿದ್ದರು.

You cannot copy contents of this page