ಕಾಂಬೋಡಿಯಾವನ್ನು ಕೇಂದ್ರೀಕರಿಸಿ ಆನ್‌ಲೈನ್ ಮೂಲಕ ಹಣ ಎಗರಿಸುವ ಜಾಲದ ಓರ್ವನ ಸೆರೆ
ಕಾಸರಗೋಡು: ಕಾಂಬೋಡಿಯಾವನ್ನು ಕೇಂದ್ರೀಕರಿಸಿ ಆನ್‌ಲೈನ್ ಮೂಲಕ ಹಣ ಎಗರಿಸುವ ಜಾಲಕ್ಕೆ ಸೇರಿದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ವರ್ಕಲ ನಿವಾಸಿ ಮುಫ್‌ಲಿಕ್ (21) ಬಂಧಿತ ಆರೋಪಿ. ಕಣ್ಣೂರು ಸೈಬರ್ ಪೊಲೀಸರ ಸಹಾಯದಿಂದ ಈತನನ್ನು ಬಂಧಿಸಲಾಗಿದೆ. ಬಂಧಿತನಾದ ಆರೋಪಿ ಚೀನಾದ ವಂಚನಾ ತಂಡದವರು ಕಾಂಬೋಡಿಯಾವನ್ನು ಕೇಂದ್ರೀಕರಿಸಿ ಆನ್‌ಲೈನ್ ಮೂಲಕ ಅಮಾಯಕರ ಬ್ಯಾಂಕ್ ಖಾತೆಯ ಹಣವನ್ನು ಜಾಲದ ಪ್ರಧಾನ ಕೊಂಡಿಗಳಲ್ಲೋರ್ವನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಸ್ಟಾರ್ ಫಂಡಿಂಗ್ ಎಂಬ ಸಂಸ್ಥೆಯ ಹೆಸರಲ್ಲಿ ಠೇವಣಿ ಹೊಡಿದಲ್ಲಿ ಅದಕ್ಕೆ ಆಕರ್ಷಕ ರೀತಿಯ ಲಾಭ ನೀಡುವುದಾಗಿ ನಂಬಿಸಿ ಕಣ್ಣೂರು ನಿವಾಸಿಯೋರ್ವರ ಬ್ಯಾಂಕ್ ಖಾತೆಯಿಂದ ೨ ಲಕ್ಷ ರೂ. ಎಗರಿಸಿದ ದೂರಿನಂತೆ ದಾಖಲಿಸಿಕೊಳ್ಳಲಾದ ಪ್ರಕರಣದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಮಾತ್ರವಲ್ಲ ಕಾಂಬೋಡಿಯಾದ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವ ಆಮಿಶವೊಡ್ಡಿ ಅಮಾಯಕರನ್ನು ಕಾಂಬೋಡಿಯಾಕ್ಕೆ ಕರೆದೊಯ್ದು ಅಲ್ಲಿ ಅವರನ್ನು ಬೆದರಿಸಿ ಮತ್ತು ಬ್ಲಾಕ್‌ಮೈಲ್ ಗೊಳಿಸಿ ಅವರ ಮೂಲಕವೇ ಹಣ ಎಗರಿಸುವುದು ಈ ವಂಚನಾ ಜಾಲದ ಪ್ರಧಾನ ಕಸುಬು ಆಗಿದೆ. ಹೀಗೆ ಕೇರಳ ಸೇರಿದಂತೆ ಭಾರತದ ಹಲವು ರಾಜ್ಯಗಳ ಯುವಕರು ಈ ಆಮಿಷಕ್ಕೆ ಬಿದ್ದು ಕಾಂಬೋಡಿಯಾಕ್ಕೆ ಹೋಗಿ ಅಲ್ಲಿ ಇನ್ನೂ ಸಿಲುಕಿಕೊಂಡಿರುವ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.