ಕಾಟುಕುಕ್ಕೆ ಕ್ಷೇತ್ರ ಬ್ರಹ್ಮಕಲಶೋತ್ಸವ: ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದಿಂದ ತಿರುವಾದಿರ ನೃತ್ಯ
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸ ವದಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಸರಗೋಡು ಮನ್ನಿ ಪ್ಪಾಡಿ ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದವರಿಂದ ಫ್ಯೂಶನ್ ತಿರುವಾದಿರ ನೃತ್ಯ ನಡೆಯಿತು. ಓಮನ ರವಿ ಮನ್ನಿಪ್ಪಾಡಿ, ಪೂರ್ಣಿಮಾ ರಾಜೇಶ್ ಮನ್ನಿಪ್ಪಾಡಿ, ಅನುಶ್ರೀ, ಶೀಬಾ ಸತೀಶ್ ಕಾಂತಿಕೆರೆ, ಲತಾ ವಸಂತ ಕಾಂತಿಕೆರೆ, ವಿನೀತ ರಾವ್, ಅಶ್ವನಿ ಶರತ್, ಡಾ. ಚೈತ್ರ ರವಿ ಮನ್ನಿಪ್ಪಾಡಿ, ಡಾ. ಮೃದುಲ ರಾಘವನ್ ಮನ್ನಿಪ್ಪಾಡಿ, ಧನಶ್ರೀ, ರಮ್ಯಾ, ಅಮಿತಾ ಶರತ್ ಮನ್ನಿಪ್ಪಾಡಿ, ಸೌಮ್ಯ ಸುನೇಶ್ ಕಾಂತಿಕೆರೆ ಮೊದಲಾದವರು ತಿರುವಾದಿರ ನೃತ್ಯದಲ್ಲಿ ಪಾಲ್ಗೊಂಡರು. ರಂಗಭೂಮಿ ನಟ, ನಿರ್ದೇಶಕ ಉದಯ ಕುಮಾರ್ ಮನ್ನಿಪ್ಪಾಡಿ ನಿರೂಪಿಸಿದರು. ರವಿ ಮಣಿಯಾಣಿ, ಕುಂಞಿರಾಮ ಮಣಿಯಾಣಿ, ರಾಘವ ಮನ್ನಿಪ್ಪಾಡಿ, ಜಯ ಕುಮಾರ್ ಮನ್ನಿಪ್ಪಾಡಿ ಸಹಕರಿ ಸಿದರು. ತಿರುವಾದಿರ ನೃತ್ಯ ತಂಡದವರನ್ನು ದೇವಸ್ಥಾನ ಸಮಿತಿ ಸದಸ್ಯರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.