ಕಾಡಾನೆ ದಾಳಿ: ಯುವಕ ಮೃತ್ಯು
ಇಡುಕ್ಕಿ: ರಾಜ್ಯದಲ್ಲಿ ಕಾಡಾನೆ ದಾಳಿಗೆ ಇನ್ನೋರ್ವ ನಾಗರಿಕ ಮೃತಪಟ್ಟಿದ್ದಾನೆ.
ಇಡುಕ್ಕಿ ಬಳಿಯ ಟಾಂಕ್‌ಕುಡಿ ನಿವಾಸಿ ಕಣ್ಣನ್ (47) ಎಂಬವರು ಮೃತ ಪಟ್ಟ ವ್ಯಕ್ತಿ. ನಿನ್ನೆ ಸಂಜೆ ಕಣ್ಣನ್ ಸ್ವಂತ ಕೃಷಿ ಸ್ಥಳದಿಂದ ಮನೆಗೆ ಮರಳುತ್ತಿದ್ದಾಗ ಕಾಡಾನೆ ದಾಳಿ ನಡೆದಿದೆ. ಆನೆ ಕಣ್ಣನ್‌ಗೆ ಸೊಂಡಿಲಿನಿಂದ ಬಡಿದು ಬಳಿಕ ತುಳಿದು ಗಂಭೀರ ಗಾಯಗೊಳಿಸಿತ್ತು. ಆನೆ ದೀರ್ಘ ಹೊತ್ತಿನ ಬಳಿಕ ಅಲ್ಲಿಂದ ಮರಳಿದೆ. ಅನಂತರವೇ ಕಣ್ಣನ್‌ರನ್ನು ನಾಗರಿಕರು ಆಸ್ಪತ್ರೆಗೆ ತಲುಪಿಸಿದ್ದಾರೆ. ಅಷ್ಟರೊಳಗೆ ನಿಧನ ಸಂಭವಿಸಿದೆ.