ಕಾಡುದಾರಿ ಮೂಲಕ ತಲುಪುವ ಭಕ್ತರಿಗೆ ಪ್ರತ್ಯೇಕ ಪರಿಗಣನೆ
ಶಬರಿಮಲೆ: ಪರಂಪರಾಗತ ಕಾನನ ದಾರಿ ಮೂಲಕ ಕಾಲ್ನಡಿಗೆ ಯಾಗಿ ಸಾಗಿ ಸನ್ನಿಧಾನಕ್ಕೆ ತಲುಪುವ ತೀರ್ಥಾಟಕರಿಗೆ ಹೆಚ್ಚು ಹೊತ್ತು ಸರದಿಯಲ್ಲಿ ನಿಲ್ಲದೆ ಸುಗಮವಾಗಿ ದೇವರ ದರ್ಶನ ನಡೆಸಲು ಅವಕಾಶ ಲಭಿಸಲಿದೆ.
ಕಾಡುದಾರಿ ಮೂಲಕ ತಲುಪುವ ತೀರ್ಥಾಟಕರಿಗೆ ಅರಣ್ಯ ಇಲಾಖೆ ಪ್ರತ್ಯೇಕ ಪಾಸ್ ನೀಡಲಿದೆ. ಅವರಿಗೆ ಪಂಪಾದಿಂದ ಸ್ವಾಮಿ ಅಯ್ಯಪ್ಪನ್ ರಸ್ತೆ ಮೂಲಕ ಸನ್ನಿಧಾನಕ್ಕೆ ತೆರಳಬಹುದಾ ಗಿದೆ. ನೀಲಿಮಲೆ ಮೂಲಕ ತೆರಳುವು ದಾದರೂ ಅಡ್ಡಿಯಿಲ್ಲ. ಶರಂಕುತ್ತಿ ದಾರಿಯನ್ನು ಹೊರತುಪಡಿಸಿ ಇವರಿಗೆ ಮರಕ್ಕೂಟಂನಿಂದ ಚಂದ್ರಾನಂದನ ರಸ್ತೆ ಮೂಲಕ ಸನ್ನಿಧಾನಕ್ಕೆ ತೆರಳಬಹುದು. ನಡಪ್ಪಂದಲ್‌ನಲ್ಲಿ ಇವರಿಗೆ ಪ್ರತ್ಯೇಕ ಸಾಲು ಏರ್ಪಡಿಸು ವುದಾಗಿ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ನೀಡುವ ಪಾಸ್ ತೋರಿಸಿದವರನ್ನು ಪೊಲೀಸರು ಪ್ರತ್ಯೇಕ ಸಾಲಿನಲ್ಲಿ ಕಳುಹಿಸುವರು. ಆ ಮೂಲಕ ಹದಿನೆಂಟು ಮೆಟ್ಟಿಲೇರಿ ದೇವರ ದರ್ಶನ ನಡೆಸಬಹುದು. ಈ ರೀತಿ ಕಾಡುದಾರಿ ಮೂಲಕ ತೆರಳು ಭಕ್ತರಿಗೆ ಪ್ರತ್ಯೇಕ ಪಾಸ್ ನೀಡುವ ವ್ಯವಸ್ಥೆ ಇಂದಿನಿಂದ ಆರಂಭ ಗೊಳ್ಳಲಿದೆ. ಎರುಮೇಲಿಯಿಂದ ಪಂಪಾವರೆಗಿನ ೩೦ ಕಿಲೋ ಮೀಟರ್ ಕಾಡುದಾರಿಯಲ್ಲಿ ತೆರಳುವ ವರಿಗೆ ಮುಕ್ಕುಳಿ ಎಂಬಲ್ಲಿಂದ ಎಂಟ್ರಿ ಪಾಸ್ ಲಭಿಸುವುದು. ಅದಕ್ಕೆ ಪುದುಶ್ಶೇರಿಯಲ್ಲಿ ಮೊಹರು ಹಾಕಿಸಿಕೊಂಡು ಮರಕ್ಕೂಟಂಗೆ ತಲುಪಬೇಕಾಗಿದೆ.