ಕಾಣೆಯಾದ ಎಮ್ಮೆಯನ್ನು ಹುಡುಕಿ ಕಾಡಿಗೆ ಹೋದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ
ಮೂಡಿಗೆರೆ: ಕಾಣೆಯಾದ ಎಮ್ಮೆಯನ್ನು ಹುಡುಕಿ ಕಾಡಿಗೆ ಹೋದ ವ್ಯಕ್ತಿ ಕಾಡಾನೆ ದಾಳಿಗೆ ಬಲಿಯಾದ ಘಟನೆ ನಡೆದಿದೆ. ಚಿಕ್ಕಮಗಳೂರಿನ ಕಾಡಿನಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಮೂಲತಃ ಕೇರಳದ ಎರ್ನಾಕುಳಂ ಕಾಲಡಿ ಕಾಡುಕೂಡಿ ಎಂಬಲ್ಲಿನ ಏಲಿಯಾಸ್ (76) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನರಸಿಂಹರಾಜಪುರ ಮಡಂಬೂರ್ ನಲ್ಲಿ ಏಲಿಯಾಸ್ ವಾಸಿಸುತ್ತಿದ್ದರು. ಕಾಣೆಯಾಗಿದ್ದ ಎಮ್ಮೆಯನ್ನು ಹುಡುಕಿ ಏಲಿಯಾಸ್ ಹಾಗೂ ಪುತ್ರ ವರ್ಗೀಸ್ ಕಾಡಿಗೆ ತೆರಳಿದ್ದರು. ಈ ವೇಳೆ ಕಾಡಾನೆ ದಾಳಿ ನಡೆಸಿದೆ. ವರ್ಗೀಸ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಮೃತ ಏಲಿಯಾಸ್ ಪತ್ನಿ ಮೇರಿ, ಇನ್ನೋರ್ವ ಪುತ್ರ ಕೆಮಿಲ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.