ಕಾಪಾ ಆರೋಪಿಯಾದ ಅನ್ಯಕೋಮಿನ  ಯುವಕನೊಂದಿಗೆ ಪರಾರಿಯಾದ ಯುವತಿಗಾಗಿ ತೀವ್ರ ಶೋಧ

ಕಾಸರಗೋಡು:  ಕಾಪಾ ಪ್ರಕರಣದ ಆರೋಪಿಯಾದ ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾದ ಯುವತಿಯ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ವಿದ್ಯಾನಗರ ಪೊಲೀಸ್  ಠಾಣಾ ವ್ಯಾಪ್ತಿಯ ಬಾಡಿಗೆ ಮನೆ ಯಲ್ಲಿ ವಾಸಿಸುವ ಕುಟುಂಬ ವೊಂದರ ಸದಸ್ಯೆಯಾದ ೨೦ರ ಹರೆಯದ ಯುವತಿ ಇತ್ತೀಚೆ ಗಿನಿಂದ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಲಭಿಸಿದ  ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದಾಗ ಯುವತಿ ಕಾಪಾ  ಪ್ರಕರಣದಲ್ಲಿ ಆರೋಪಿಯಾದ ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿದ್ದಾಳೆಂದು ತಿಳಿದು ಬಂದಿದೆ.  ಯುವತಿಯ ಪತ್ತೆಗಾಗಿ  ಪೊಲೀಸರು ತನಿಖೆಯನ್ನು ವಿವಿಧ ಕಡೆಗಳಿಗೆ ವಿಸ್ತರಿಸಿದ್ದಾರೆ.

ಕಾಪಾ ಪ್ರಕರಣದ ಆರೋ ಪಿಯೂ, ಅನ್ಯಕೋಮಿನ ಯುವಕ ನೊಂದಿಗೆ ಯುವತಿ ಪರಾರಿಯಾಗಿ ರುವುದು ಗಂಭೀರ ಸಂಗತಿಯೆಂದು ತಿಳಿದು ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. 

ಯುವತಿಯನ್ನು ಶೀಘ್ರ ಪತ್ತೆಹಚ್ಚದಿದ್ದಲ್ಲಿ ಅದು ಭಾರೀ ಸಮಸ್ಯೆಗಳಿಗೆ ಕಾರಣ ವಾಗಲಿದೆಯೆಂಬ ಬಗ್ಗೆ ಪೊಲೀಸ್‌ನ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ.  ಇದೇ ವೇಳೆ ಯುವತಿಯ ಭಾವಚಿತ್ರಗಳನ್ನು ಹಲವರು ಸಾಮಾಜಿಕ ತಾಣಗಳಲ್ಲಿ  ವ್ಯಾಪಕವಾಗಿ ಪ್ರಚಾರ ನಡೆಸುತ್ತಿದ್ದು, ಈಕೆ ಪತ್ತೆಯಾದಲ್ಲಿ ಮಾಹಿತಿ ನೀಡಬೇಕೆಂದೂ ತಿಳಿಸಲಾಗಿದೆ.

You cannot copy contents of this page