ಕಾಪಾ ಕಾನೂನು ಉಲ್ಲಂಘಿಸಿದ ಆರೋಪಿ ಸೆರೆ

ಕಾಸರಗೋಡು: ಕಾಪಾ ಕಾನೂನು ಉಲ್ಲಂಘಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೌತ್ ಚಿತ್ತಾರಿ ಕೂಳಿಕ್ಕಾಡ್ ಹೌಸ್‌ನ ಸಿ.ಕೆ. ಶಹೀರ್ (22) ಬಂಧಿತ ಆರೋಪಿ. ಈತನ ವಿರುದ್ಧ ಕಣ್ಣೂರು ಡಿಐಜಿ ನಿರ್ದೇಶ ಪ್ರಕಾರ ಕಾಪಾ ಕಾನೂನು ಹೇರಲಾಗಿತ್ತು. ಅದರ ಶರತ್ತುಗಳ ಪ್ರಕಾರ ಆತ ನಿಗದಿತ ಸಮಯಗಳಲ್ಲಿ ಪೊಲೀಸ್ ಠಾಣೆಯಲ್ಲಿ ಹಾಜರಾಗಬೇಕಾಗಿ ದ್ದರೂ, ಆತ ಹಾಜರಾಗಲಿಲ್ಲ. ಆ ಮೂಲಕ ಆತ ಕಾಪಾ ಕಾನೂನು ಉಲ್ಲಂಘಿಸಿದ್ದನೆಂಬ ಆರೋಪದಂತೆ ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಮತ್ತು ಎಸ್‌ಐ ಶರಂಗಾಧರನ್‌ರ ನೇತೃತ್ವದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತನನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

You cannot copy contents of this page