ಕಾಪಾ ಕೇಸು: ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪಿ ಸೆರೆ
ಕಾಸರಗೋಡು: ಕಾಪಾ ಕಾನೂನು ಪ್ರಕಾರ ಗಡಿಪಾರು ಮಾಡಿದ ಬಳಿಕ ಅದರ ನಿಬಂಧನೆಗಳನ್ನು ಉಲ್ಲಂಘಿಸಿ ಊರಿಗೆ ಬಂದ ಆರೋ ಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
ಪಳ್ಳಿಕೆರೆ ತಾಯಲ್ ಮವ್ವಲ್ ಹದ್ದಾದ್‌ನಗರದ ಅಶ್ರಫ್ ಅಲಿಯಾಸ್ ಕತ್ತಿ ಅಶ್ರಫ್ (43) ಬಂಧಿತ ಆರೋಪಿ. ಈತ ಮಾದಕದ್ರವ್ಯ, ಹಲ್ಲೆ ಇತ್ಯಾದಿ ನಾಲ್ಕರಷ್ಟು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಕಳೆದ ಡಿಸೆಂಬರ್‌ನಲ್ಲಿ ಕಾಪಾ ಕಾನೂನು ಹೇರಿ ಊರಿನಿಂದ ಗಡಿಪಾರು ಮಾಡಲಾಗಿತ್ತು. ಅದರ ನಿಬಂಧನೆಗಳನ್ನು ಉಲ್ಲಂಘಿಸಿ ಆತ ಊರಿಗೆ ಬಂದಿದ್ದನು. ಆ ಬಗ್ಗೆ ಲಭಿಸಿದ ಮಾಹಿತಿ ಪ್ರಕಾರ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ನಂತರ ಜೈಲಿಗಟ್ಟಲಾಗಿದೆ.