ಕಾಪಾ ಪ್ರಕಾರ ಜೈಲು ಸೇರಿ ಬಿಡುಗಡೆಗೊಂಡಾತನ ವಿರುದ್ಧ ಮತ್ತೆ ಕಾಪಾ ಹೇರಿಕೆ, ಬಂಧನ
ಕಾಸರಗೋಡು: ಕಾಪಾ ಕಾನೂನು ಪ್ರಕಾರ ಬಂಧಿತನಾಗಿ ಜೈಲು ಸೇರಿದ ಬಳಿಕ ಬಿಡುಗಡೆಗೊಂಡ ಆರೋಪಿ ವಿರುದ್ಧ ಕಾಸರಗೋಡು ಪೊಲೀಸರು ಮತ್ತೆ ಕಾಪಾ ಹೇರಿ ಆತನನ್ನು ಬಂಧಿಸಿದ್ದಾರೆ.
ಕಾಸರಗೋಡು ಬಟ್ಟಂಪಾರೆ ನಿವಾಸಿ ಮಹೇಶ್ (೩೨) ಬಂಧಿತ ವ್ಯಕ್ತಿ. ಹಲವು ಪ್ರಕರಣದಲ್ಲಿ ಆರೋಪಿಯಾಗಿ ರುವ ಈತನ ವಿರುದ್ದ ಪೊಲೀಸರು ಈ ಹಿಂದೆ ಕಾಪಾ ಕಾನೂನು ಹೇರಿ ಆತನನ್ನು ಬಂಧಿಸಿ ನಂತರ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಕೂಡಿ ಹಾಕಲಾ ಗಿತ್ತು. ಬಳಿಕ ಆತ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದನು. ಆ ಬಳಿಕ ಸೆಪ್ಟಂಬರ್ ೩೦ರಂದು ಕಾಸರಗೋಡು ಪ್ರೆಸ್ಕ್ಲಬ್ ಜಂಕ್ಷನ್ ಬಳಿಯ ಪೆಟ್ರೋಲ್ ಬಂಕ್ಗೆ ಪೆಟ್ರೋಲ್ ತುಂಬಿಸಲು ಬಂದ ಮಹೇಶ್ ಹಣದ ವಿಷಯದಲ್ಲಿ ಆ ಬಂಕ್ನ ಕಾರ್ಮಿಕ ಅಭಿಜಿತ್ನೊಂ ದಿಗೆ ವಾಗ್ವಾದ ನಡೆಸಿದ್ದನು. ಆಗ ಆತ ಪೆಟ್ರೋಲ್ ಬಂಕ್ನಲ್ಲಿ ಕೆಲವೊಂದು ಸಾಮಗ್ರಿಗಳನ್ನು ಹಾನಿಗೊಳಿಸಿ ಆ ಮೂಲಕ ೩೬೦೦೦ ರೂ. ನಷ್ಟ ಉಂಟುಮಾಡಿರುವುದಾಗಿ ಆರೋಪಿಸಿ ಆ ಬಂಕ್ನ ಕಾರ್ಮಿಕ ಅಭಿಜಿತ್ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಮಹೇಶ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಮಹೇಶ್ನನ್ನು ಬಂಧಿಸಿದ್ದಾರೆ ಮಾತ್ರವಲ್ಲ ಆಥನ ವಿರುದ್ದ ಮತ್ತೆ ಕಾಪಾ ಹೇರಿದ್ದಾರೆ.