ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ವಂಚನೆ: ಒಂದನೇ ಆರೋಪಿಗೆ ಜಾಮೀನು

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ 4.76 ಕೋಟಿ ರೂ. ಲಪಟಾಯಿಸಿದ ಪ್ರಕರಣದ ಒಂದನೇ ಆರೋಪಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಿಪಿಎಂ ಮಾಜಿ ಲೋಕಲ್ ಕಮಿಟಿ ಸದಸ್ಯನೂ, ಸೊಸೈಟಿಯ ಕಾರ್ಯದರ್ಶಿಯಾದ ಕರ್ಮಂ ತ್ತೋಡಿ ಬಾಲಕಂಡದ ಕೆ. ರತೀಶನ್‌ಗೆ ಹೈಕೋರ್ಟ್ ನಿಬಂಧನೆ ಗಳೊಂದಿಗೆ ಜಾಮೀನು ನೀಡಿದೆ. ಪ್ರಕರಣ ದಾಖಲಿಸಿ ೯೦ ದಿನಗಳು ಕಳೆದರೂ ತನಿಖಾ ತಂಡಕ್ಕೆ ಆರೋಪ ಪಟ್ಟಿ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಖ್ಯ ಆರೋಪಿಯಾದ ರತೀಶನ್‌ಗೆ ಜಮೀನು ಲಭಿಸಿದೆ. ಪ್ರಕರಣದ ಇತರ ಎಲ್ಲಾ ಆರೋಪಿಗಳಿಗೆ ಈ ಹಿಂದೆಯೇ ಜಾಮೀನು ಲಭಿಸಿತ್ತು. ಕಣ್ಣೂರು ಕ್ರೈಂ ಬ್ರಾಂಚ್‌ನ ಆರ್ಥಿಕ ಅಪರಾಧ ತನಿಖಾ ವಿಭಾಗ ಈಗ ಪ್ರಕರಣದ ತನಿಖೆ ನಡೆಸುತ್ತಿದೆ. ಸೊಸೈಟಿಯಲ್ಲಿ ನಡೆದ ವಂಚನೆಗೆ ಸಂಬಂಧಿಸಿ ಮೇ ೧೩ರಂದು ಆದೂರು ಪೊಲೀಸರು  ಕೇಸು ದಾಖಲಿಸಿಕೊಂ ಡಿದ್ದರು. ಅನಂತರ ಜಿಲ್ಲಾ ಕ್ರೈಂ ಬ್ರಾಂಚ್  ತನಿಖೆ ನಡೆಸಿದ ಪ್ರಕರಣ ವನ್ನು ಬಳಿಕ ರಾಜ್ಯ ಕ್ರೈಂ ಬ್ರಾಂಚ್‌ಗೆ  ಹಸ್ತಾಂತರಿಸಲಾಗಿದೆ. ಸಹಕಾರಿ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಸೊಸೈಟಿಯಲ್ಲಿ ವಂಚನೆ ಪತ್ತೆಯಾಗಿತ್ತು.

ಚಿನ್ನ ಅಡವಿರಿಸದೆ ಸಾಲ  ಮಂಜೂರು ಮಾಡಿರುವುದಾಗಿ ದಾಖಲೆ ತಯಾರಿಸಿದ್ದು, ಕೇರಳ ಬ್ಯಾಂಕ್‌ನ ಕ್ಯಾಶ್ ಕ್ರೆಡಿಟ್ ಸಾಲಗಳನ್ನು ಸ್ವಂತದವರ ಖಾತೆಗಳಿಗೆ ಬದಲಾಯಿಸಿರುವುದು ಹಾಗೂ  ಅಡವಿರಿಸಿದ ಚಿನ್ನವನ್ನು ಕಳವು ನಡೆಸಿರುವುದು ಪತ್ತೆಯಾ ಗಿತ್ತು.  ರತೀಶನ್‌ನ ನೇತೃತ್ವದಲ್ಲಿ ಈ ವಂಚನೆ ನಡೆದಿರುವುದಾಗಿ ದೂರಲಾಗಿದೆ. ಲಪಟಾಯಿಸಿದ  ಚಿನ್ನದ ಪೈಕಿ 100 ಪವನ್ ಚಿನ್ನವನ್ನು ಪೆರಿಯ, ಪಳ್ಳಿಕ್ಕೆರೆ ಎಂಬಿಡೆಗಳಲ್ಲಿರುವ  ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಅಡವಿರಿಸಿರುವುದಾಗಿ  ಕ್ರೈಂ ಬ್ರಾಂಚ್ ತನಿಖೆಯಲ್ಲಿ ಪತ್ತೆಯಾಗಿದೆ.

Leave a Reply

Your email address will not be published. Required fields are marked *

You cannot copy content of this page