ಕಾರಡ್ಕ ಸೊಸೈಟಿಯಿಂದ 4.76 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಹೊಸ ತಿರುವು: ಪೊಲೀಸರಿಗೆ ನೀಡಲೆಂದು ತಿಳಿಸಿ ಮೂರೂವರೆ ಲಕ್ಷ ರೂ. ಲಪಟಾವಣೆ; ಮೂರು ಮಂದಿ ವಿರುದ್ಧ ಕೇಸು
ಮುಳ್ಳೇರಿಯ: ಕಾರಡ್ಕ ಅಗ್ರಿ ಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ 4.76 ಕೋಟಿ ರೂಪಾಯಿ ಲಪಟಾಯಿಸಿದ ಪ್ರಕರಣ ದಲ್ಲಿ ಮತ್ತೊಂದು ಹೊಸ ತಿರುವು ಉಂಟಾಗಿದೆ. ಪ್ರಕರಣದಲ್ಲಿ ಆರೋಪಿ ಯಾಗದಿರಲು ಪೊಲೀಸರಿಗೆ ನೀಡ ಲೆಂದು ತಿಳಿಸಿ ಬೇಕಲ ನಿವಾಸಿಯಿಂದ ಮೂರೂವರೆ ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ದೂರುಂಟಾಗಿದೆ. ಹಣ ನಷ್ಟಗೊಂಡ ವ್ಯಕ್ತಿ ನೀಡಿದ ದೂರಿನಂತೆ ಜಿಲ್ಲಾ ಕ್ರೈಂ ಬ್ರಾಂಚ್ ಮೂರು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಬೇಕಲ ನಿವಾಸಿ ಅಬೂಬಕ್ಕರ್ ಎಂಬವರು ನೀಡಿದ ದೂರಿನಂತೆ ಕೋಟಿಕುಳದ ಟೈಗರ್ ಸಮೀರ್, ಬೇಕಲ ನಿವಾಸಿಗಳಾದ ರಾಶಿದ್, ಇಸ್ಮಾಯಿಲ್ ಎಂಬಿವರ ವಿರುದ್ಧ ಕೇಸು ದಾಖಲಿ ಲಾಗಿದೆ. ಮೂರೂವರೆ ಲಕ್ಷ ರೂಪಾಯಿ ನೀಡದಿದ್ದಲ್ಲಿ ಕಾರಡ್ಕ ಸೊಸೈಟಿಯಿಂದ ಕೋಟ್ಯಂತರ ರೂಪಾಯಿ ಲಪಟಾಯಿ ಸಿದ ಪ್ರಕರಣದಲ್ಲಿ ಆರೋಪಿಯಾಗಿ ಸುವುದಾಗಿ ತಿಳಿಸಿ ಬೆದರಿಕೆಯೊಡ್ಡಿ ರುವುದಾಗಿ ಅಬೂಬಕ್ಕರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಎರಡು ಗಡುಗಳಾಗಿ ಹಣ ನೀಡಿದ್ದು, ಅನಂ ತರವೇ ವಂಚನೆಗೊಳಗಾಗಿರುವುದಾಗಿ ತಿಳಿದುಬಂದಿದೆಯೆಂದು ಅಬೂಬಕರ್ ದೂರಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಕಾರಡ್ಕ ಸೊಸೈಟಿಯಿಂದ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ತನಿಖೆ ಇನ್ನೂ ಗುರಿತಲುಪಿಲ್ಲ. ಮೊದಲು ಆದೂರು ಪೊಲೀಸರು, ಅನಂತರ ಜಿಲ್ಲಾ ಕ್ರೈಂ ಬ್ರಾಂಚ್ ತನಿಖೆ ನಡೆಸಿದ ಈ ಪ್ರಕರಣ ವನ್ನು ಪ್ರಸ್ತುತ ರಾಜ್ಯ ಕ್ರೈಂಬ್ರಾಂಚ್‌ನ ಆರ್ಥಿಕ ಅಪರಾಧ ಪತ್ತೆ ವಿಭಾಗ ತನಿಖೆ ನಡೆಸುತ್ತಿದೆ. ಪ್ರಕರಣದ ತನಿ ಖೆಯ ಹೊಣೆಗಾರಿಕೆಯಿದ್ದ ಡಿವೈಎಸ್ಪಿ ಪಿ. ಮಧುಸೂದನನ್‌ರನ್ನು ಕಾಸರ ಗೋಡು ಸ್ಟೇಟ್ ಕ್ರೈಂ ಬ್ರಾಂಚ್‌ಗೆ ವರ್ಗಾ ಯಿಸಿರುವುದೇ ತನಿಖೆ ಗುರಿಮುಟ್ಟ ದಿರಲು ಕಾರಣವಾಗಿದೆ. ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇ ಟಿವ್ ಸೊಸೈಟಿಯಿಂದ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಪ್ರಕರಣ ಆರಂಭದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಗ್ರಾಹಕರು ಠೇವಣಿ ಮೊತ್ತ ಹಾಗೂ ಅಡವಿರಿಸಿದ ಚಿನ್ನಾಭರಣ ಮರಳಿ ಲಭಿಸದೆ ಪ್ರತಿದಿನ ಸೊಸೈಟಿಗೆ ತಲುಪಿ ಮರಳಬೇಕಾದ ಸ್ಥಿತಿಯಲ್ಲಿ ದ್ದಾರೆ. ವಂಚನೆ ಪ್ರಕರಣದಲ್ಲಿ ಸೆರೆ ಗೀಡಾದ ಸಿಪಿಎಂ ಮಾಜಿ ಲೋಕಲ್ ಕಮಿಟಿ ಸದಸ್ಯನೂ ಸೊಸೈಟಿಯ ಕಾರ್ಯದರ್ಶಿಯಾದ ಕರ್ಮಂತೋಡಿ ಬಾಳಕಂಡದ ಕೆ. ರತೀಶ್, ಕಣ್ಣೂರು ನಿವಾಸಿ ಮಂಞಕಂಡಿ ಜಬ್ಬಾರ್, ಕಲ್ಲಿಕೋಟೆಯ ನಬೀಲ್ ಮೊದ ಲಾದ ಆರೋಪಿಗಳು ಈಗಲೂ ರಿಮಾಂಡ್‌ನಲ್ಲಿದ್ದಾರೆ. ಕೋಟ್ಯಂತರ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಸಹಕಾರಿ ಇಲಾಖೆ ಇಲಾಖಾ ಮಟ್ಟದ ತನಿಖೆಯನ್ನೂ ಪೂರ್ತಿಗೊಳಿಸಿಲ್ಲ.