ಕಾರಡ್ಕ ಸೊಸೈಟಿ ವಂಚನೆ ಪ್ರಕರಣ: ಸಮಗ್ರ ತನಿಖೆಗಾಗಿ ರಾಜ್ಯ ಕ್ರೈಂಬ್ರಾಂಚ್ ಶೀಘ್ರ ಆಗಮನ; ಚಿನ್ನ ಅಡವಿರಿಸಿದವರು ಆತಂಕದಲ್ಲಿ

ಕಾಸರಗೋಡು: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಓಪರೇಟಿವ್ ಸೊಸೈಟಿಯಲ್ಲಿ ನಡೆದ 4.76 ಕೋಟಿ ರೂಪಾಯಿಗಳ ವಂಚನೆಯ ಹಿಂದಿನ  ನಿಗೂಢತೆಗಳನ್ನು ಪತ್ತೆಹಚ್ಚಲು  ರಾಜ್ಯ ಕ್ರೈಂ ಬ್ರಾಂಚ್ ತಂಡ ಕಾಸರಗೋಡಿಗೆ ಶೀಘ್ರ ತಲುಪಲಿದೆ. ಕ್ರೈಂ ಬ್ರಾಂಚ್‌ನ ಆರ್ಥಿಕ ಅಪರಾಧ ಪತ್ತೆ ವಿಭಾಗ ಈ ಕುರಿತಾಗಿ ಸಮಗ್ರ ತನಿಖೆ ನಡೆಸಲಿದೆ. ಇದಕ್ಕಿರುವ ಸಿದ್ಧತೆಗಳು ಕಣ್ಣೂರಿನ ಕಚೇರಿಯಲ್ಲಿ ನಡೆಯುತ್ತಿರುವುದಾಗಿ ಸೂಚನೆ ಲಭಿಸಿದೆ. 

ಲೋಕಲ್ ಪೊಲೀಸರು ಹಾಗೂ ಜಿಲ್ಲಾ  ಕ್ರೈಂ ಬ್ರಾಂಚ್ ನಡೆಸಿದ ತನಿಖೆಯಲ್ಲಿ ವಂಚನೆಗೆ ಸಂಬಂಧಿಸಿ ಬೆಚ್ಚಿ ಬೀಳಿಸುವ ಮಾಹಿತಿಗಳು ಲಭಿಸಿದೆಯೆಂದು ಮಾಹಿತಿಯಿದೆ. ವಂಚನೆ ಮೂಲಕ ಲಪಟಾಯಿಸಿದ ಹಣ ಖರ್ಚಾಗಿರುವುದರಲ್ಲಿ ಅಂತಾ ರಾಷ್ಟ್ರೀಯ ನಂಟನ್ನು ಪತ್ತೆಹಚ್ಚಲಾ ಗಿತ್ತು. ಆದರೆ ತನಿಖೆ ಸೊಸೈಟಿಯ ಸೆಕ್ರೆಟರಿಯೂ ಸಿಪಿಎಂ ಮಾಜಿ ಲೋಕಲ್ ಕಮಿಟಿ ಸದಸ್ಯನಾದ  ಕರ್ಮಂತೋಡಿ ಬಾಳಕಂಡದ ಕೆ. ರತೀಶ್, ಕಣ್ಣೂರಿನ ಮಂಞಕಂಡಿ ಅಬ್ದುಲ್ ಜಬ್ಬಾರ್, ಕಲ್ಲಿಕೋಟೆಯ ನಬೀಲ್,  ಎಂಬಿವರನ್ನು ಕೇಂದ್ರೀಕರಿಸಿ ನಡೆಯುತ್ತಿದೆ.

ಕೋಟ್ಯಂತರ ರೂಪಾಯಿಗಳ ವಂಚನೆಯನ್ನು ರತೀಶ್ ಮಾತ್ರ ಯೋಚಿಸಿದರೆ ನಡೆಸಲು ಸಾಧ್ಯವಿಲ್ಲ. ಇದರ ಹಿಂದೆ ಭಾರೀ ಶಕ್ತಿಗಳೇ ಕಾರ್ಯಾಚರಿಸಿವೆಯೆಂದು ತನಿಖಾ ತಂಡಕ್ಕೆ ಸಂಶಯ ಹುಟ್ಟಿಕೊಂಡಿದೆ. ಆದರೆ ಆ ದಿಶೆಯಲ್ಲಿ ತನಿಖೆ ಸಾಗಲಿಲ್ಲ. ಮಾತ್ರವಲ್ಲ ವಂಚನೆ ಮೂಲಕ ಲಪಟಾಯಿಸಿದ ಹಣವನ್ನು ಜಬ್ಬಾರ್ ಹಾಗೂ ನಬೀಲ್‌ಗೆ ನೀಡಿದ ಮಧ್ಯವರ್ತಿಯನ್ನು ಸೆರೆಹಿಡಿಯಲು ತನಿಖಾ ತಂಡಕ್ಕೆ ಸಾಧ್ಯವಾಗಲಿಲ್ಲ. ಇದರ ಹಿಂದೆ ಭಾರೀ ಒತ್ತಡ ಇದೆ ಯೆಂಬ ಆರೋಪವೂ ಕೇಳಿಬರುತ್ತಿದೆ.  ಇದೇ ವೇಳೆ ಹೊಸ ತನಿಖಾ ಏಜೆನ್ಸಿಗಳು  ಬರುವುದರಿಂದ  ಕಾರಡ್ಕ ಸೊಸೈಟಿಯಲ್ಲಿ ಚಿನ್ನಾಭರಣ ಅಡವಿರಿಸಿ ಸಾಲ ತೆಗೆದಿರುವ  ಗ್ರಾಹಕರಿಗೆ ಆತಂಕ ಸೃಷ್ಟಿಯಾಗಿದೆ. ಸೊಸೈಟಿಯಿಂದ ಸೆಕ್ರೆಟರಿ ನೇತೃತ್ವದಲ್ಲಿ ಲಪಟಾಯಿಸಿದ ಚಿನ್ನಾ ಭರಣಗಳನ್ನು ವಿವಿಧ  ಬ್ಯಾಂಕ್‌ಗಳಲ್ಲಿ ಅಡವಿರಿಸಿದ್ದು ಅದನ್ನು ವಶಪಡಿಸಲಾಗಿದೆ. ಆದರೆ ತನಿಖೆ ಮುಂದುವರಿಯುತ್ತಿರುವು ದರಿಂದ ಈ ಚಿನ್ನಾಭರಣಗಳು ಅವುಗಳ  ವಾರೀಸು ದಾರರಿಗೆ ಮರಳಿ ನೀಡಲು ಸಾಧ್ಯವಿ ಲ್ಲ.  ಇದು ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page