ಕಾರಡ್ಕ ಸೊಸೈಟಿ ವಂಚನೆ ಪ್ರಕರಣ: ತಲೆಮರೆಸಿಕೊಂಡ ಸೆಕ್ರೆಟರಿ, ಸಹಚರ ಬಂಧನ
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ ಕೋಟ್ಯಂತರ ರೂಪಾಯಿಗಳೊಂದಿಗೆ ತಲೆಮರೆಸಿಕೊಂಡಿದ್ದ ಸೆಕ್ರೆಟರಿ ಸಹಿತ ಇಬ್ಬರು ಸೆರೆಗೀಡಾಗಿದ್ದಾರೆ.
ಸೊಸೈಟಿಯ ಸೆಕ್ರೆಟರಿ, ಸಿಪಿಎಂ ಲೋಕಲ್ ಕಮಿಟಿ ಸದಸ್ಯನಾದ ಕರ್ಮಂತೋಡಿ ಬಾಳಕಂಡದ ಕೆ. ರತೀಶನ್ ಹಾಗೂ ವಂಚನೆಗೆ ಸಹಕರಿಸಿದನೆಂದು ಸಂಶಯಿಸುವ ಕಣ್ಣೂರು ಮಂಜಕಂಡ ಎಂಬಲ್ಲಿನ ಅಬ್ದುಲ್ ಜಬ್ಬಾರ್ ಎಂಬಿವರನ್ನು ಸೆರೆಹಿಡಿಯಲಾಗಿದೆ.
ತಮಿಳುನಾಡಿನ ಈ ರೋಡ್‌ನಲ್ಲಿ ಲಾಡ್ಜ್‌ನಿಂದ ಈ ಇಬ್ಬರನ್ನು ಕಸ್ಟಡಿಗೆ ತೆಗೆಯಲಾಗಿದೆ.
ಸೊಸೈಟಿಯಿಂದ ಲಪಟಾಯಿ ಸಿದ ಹಣದೊಂದಿಗೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆದರೆ ಸೆರೆಗೀಡಾಗುವ ವೇಳೆ ಅವರ ಕೈಯಲ್ಲಿ ಖರ್ಚಿಗೆ ಬೇಕಾದ ಸಣ್ಣ ಮೊತ್ತ ಮಾತ್ರವೇ ಪತ್ತೆಯಾಗಿದೆ. ಆದ್ದರಿಂದ ಲಪಟಾಯಿಸಿದ ಹಣ ಎಲ್ಲಿದೆ ಎಂದು ತಿಳಿಯಲು ಪೊಲೀ ಸರು ತನಿಖೆ ಮುಂದುವರಿಸಿದ್ದಾರೆ.
ಸೊಸೈಟಿಯಿಂದ ರತೀಶನ್ ಹಲವು ವೇಳೆಗಳಲ್ಲಾಗಿ 3.64 ಕೋಟಿ ರೂಪಾಯಿಗಳನ್ನು ಲಪಟಾಯಿಸಿದ್ದಾನೆನ್ನಲಾಗಿದೆ. ಈ ವಂಚನೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆತನನ್ನು ಸೆಕ್ರೆಟರಿ ಸ್ಥಾನದಿಂದ ಅಮಾನತು ಗೊಳಿಸಲಾಗಿತ್ತು. ಅನಂತರ ಕಳೆದ ತಿಂಗಳ 2ರಂದು ಸೊಸೈಟಿಗೆ ತಲುಪಿದ ರತೀಶನ್ ಗ್ರಾಹಕರು ಅಡವಿರಿಸಿದ 1.12 ಕೋಟಿ ರೂಪಾಯಿಗಳ ಚಿನ್ನವನ್ನೂ ಲಪಟಾಯಿಸಿ ತಲೆ ಮರೆಸಿಕೊಂಡಿದ್ದನೆಂದು ದೂರಲಾಗಿದೆ. ಸೊಸೈಟಿಯಲ್ಲಿ ನಡೆದ ವಂಚನೆ ಕುರಿತಾಗಿ ಅಧ್ಯಕ್ಷ ನೀಡಿದ ದೂರಿನಂತೆ ಮೇ 13ರಂದು ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಅನಂತರ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಂಬ್ರಾಂಚ್‌ಗೆ ಹಸ್ತಾಂ ತರಿಸಲಾಗಿತ್ತು. ಚಿನ್ನಾಭರಣ ಅಡವಿರಿಸಲು ಸಹಾಯವೊದಗಿಸಿದ ಮೂರು ಮಂದಿಯನ್ನು ಈಗಾಗಲೇ ಸೆರೆ ಹಿಡಿಯಲಾಗಿತ್ತು. ಸೆರೆಗೀಡಾದ ರತೀಶನ್ ಹಾಗೂ ಅಬ್ದುಲ್ ಜಬ್ಬಾರ್‌ನನ್ನು ಪೊಲೀಸರು ಕಾಸರಗೋಡಿಗೆ ತಲುಪಿಸಿ ಸಮಗ್ರ ತನಿಖೆಗೊಳಪಡಿಸಲಾಗುತ್ತಿದೆ.
ರತೀಶನ್, ಜಬ್ಬಾರ್ ಸೆರೆಗೆ ಸಹಾಯಕವಾದುದು ಸ್ನೇಹಿತನಿಗೆ ಮಾಡಿದ ಫೋನ್ ಕರೆ
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣದ ಮುಖ್ಯ ಆರೋಪಿಗಳು ತಲೆಮರೆಸಿಕೊಂಡು ವಾಸಿಸುತ್ತಿದ್ದ ಲ್ಲಿಂದ ಸ್ನೇಹಿತನ ಫೋನ್‌ಗೆ ಕರೆಮಾ ಡಿದ್ದು, ಇದುವೇ ಅವರ ಅಡಗುತಾ ಣದ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಲು ಸಹಾಯಕವಾಯಿತು.
ತಲೆಮರೆಸಿಕೊಂಡಿದ್ದ ರತೀಶನ್ ಹಾಗೂ ಅಬ್ದುಲ್ ಜಬ್ಬಾರ್ ಜತೆ ಯಾಗಿ ಕರ್ನಾಟಕ ಹಾಗೂ ತಮಿಳು ನಾಡಿನ ವಿವಿಧ ಕಡೆಗಳಲ್ಲಿ ವಾಸಿಸಿ ದ್ದರು. ಈ ವೇಳೆ ಅವರು ವಾಟ್ಸಪ್ ಸಹಿತ ಸಾಮಾಜಿಕ ತಾಣಗಳಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರನ್ನು ರತೀಶನ್ ಸಂಪರ್ಕಿಸುತ್ತಿದ್ದುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮೊಬೈಲ್ ಫೋನ್ ಸಿಗ್ನಲ್ ಆಧರಿಸಿ ಅವರನ್ನು ಹಿಂಬಾಲಿಸಿದ ಪೊಲೀಸರು ಆರೋಪಿಗಳನ್ನು ಸೆರೆಹಿಡಿಯಲು ಅವರ ಸಮೀಪಕ್ಕೆ ತಲುಪಿದೊಡನೆ ಸಿಗ್ನಲ್ ನಷ್ಟಗೊಂಡಿತ್ತು. ಇದರಿಂದ ತನಿಖೆ ಹಳಿತಪ್ಪಿತು. ಸೊಸೈಟಿಯಲ್ಲಿ ವಂಚನೆ ಬ ಹಿರಂಗಗೊಂಡು ವಾರಗಳು ಹಲವು ಕಳೆದರೂ ಆರೋಪಿಗಳನ್ನು ಸೆರೆಹಿಡಿಯಲು ತನಿಖಾ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಆರೋಪಿಗಳನ್ನು ಸೆರೆಹಿಡಿಯುತ್ತಿಲ್ಲವೆಂಬ ಆರೋಪ ತೀವ್ರಗೊಂಡಾಗ ಹೊಸ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ನೇಮಿಸಿದ್ದರು. ಬೇಕಲ ಡಿವೈಎಸ್ಪಿ ಜಯನ್ ಡೊಮಿನಿಕ್, ಆದೂರು ಇನ್‌ಸ್ಪೆಕ್ಟರ್ ಪಿ.ಸಿ. ಸಂಜಯ್ ಕುಮಾರ್ ಎಂಬಿವರ ನೇತೃತ್ವದ ತಂಡ ರತೀಶನ್‌ನೊಂದಿಗೆ ನಂಟುಳ್ಳ 30ರಷ್ಟು ಸ್ನೇಹಿತರ ಮೇಲೆ ನಿಗಾ ವಹಿಸಿತ್ತು. ಇದೇ ವೇಳೆ ಆರೋಪಿಗಳು ಹೊಸ ಮೊಬೈಲ್ ಖರೀದಿಸಿ ಹೊಸ ಸಿಮ್ ಉಪಯೋಗಿಸತೊಡಗಿದರು. ಈ ಮಧ್ಯೆ ಮತ ಎಣಿಕೆ ದಿನದಂದು ಫಲಿತಾಂಶದ ಕುರಿತು ತಿಳಿಯಲು ರತೀಶನ್ ಸ್ನೇಹಿತನಿಗೆ ಕರೆ ಮಾಡಿದ್ದಾನೆ. ಇದು ಗಮನಕ್ಕೆ ಬಂದ ಪೊಲೀಸ್ ತಂಡ ಲೊಕೇಶನ್ ಗೊತ್ತುಪಡಿಸಿ ತಮಿಳನಾಡಿಗೆ ತೆರಳಿತ್ತು. ಈವೇಳೆ ಈರೋಡ್‌ನ ಲಾಡ್ಜ್‌ನಲ್ಲಿ ರತೀಶನ್ ಹಾಗೂ ಜಬ್ಬಾರ್ ವಾಸಿಸುತ್ತಿದ್ದರು. ಅಲ್ಲಿಂದ ಅವರಿಬ್ಬರನ್ನು ತನಿಖಾತಂಡ ಕಸ್ಟಡಿಗೆ ತೆಗೆದುಕೊಂಡಿದೆ.