ಕಾರಡ್ಕ ಸೊಸೈಟಿ ವಂಚನೆ ಹಿಂದೆ ಬೃಹತ್ ಶಕ್ತಿಗಳು : ತಲೆಮರೆಸಿಕೊಂಡ ರತೀಶ್, ಕಣ್ಣೂರು ನಿವಾಸಿ ಶಿವಮೊಗ್ಗದಲ್ಲಿ
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ 4.76 ಕೋಟಿ ರೂಪಾಯಿಗಳನ್ನು ಲಪಟಾಯಿಸಿದ ಘಟನೆಯ ಹಿಂದೆ ಕಣ್ಣೂರು ಕೇಂದ್ರೀಕರಿಸಿರುವ ಭಾರೀ ಶಕ್ತಿಗಳು ಅಡಗಿವೆಯೆಂದು ಸೂಚನೆ ಲಭಿಸಿದೆ. ವಂಚನೆ ಬಹಿರಂಗಗೊA ಡೊಡನೆ ತಲೆಮರೆಸಿಕೊಂಡ ಸೊಸೈಟಿಯ ಕಾರ್ಯದರ್ಶಿ ಕೆ. ರತೀಶ್, ಕಣ್ಣೂರು ನಿವಾಸಿಯಾದ ಸೂತ್ರಧಾರ ಜಬ್ಬಾರ್ ಎಂಬಿವರು ಶಿವಮೊಗ್ಗದಲ್ಲಿ ತಲೆಮರೆ ಸಿಕೊಂ ಡಿದ್ದಾರೆಂದು ಖಚಿತಗೊಂಡಿದೆ. ಇವರನ್ನು ಸೆರೆಹಿಡಿಯಲು ಪ್ರತ್ಯೇಕ ತನಿಖಾ ತಂಡದ ಸದಸ್ಯರಾದ ಮೇಲ್ಪರಂಬ ಎಸ್.ಐ ಹಾಗೂ ತಂಡ ಶಿವಮೊಗ್ಗಕ್ಕೆ ತೆರಳಿ ಶೋಧ ಆರಂಭಿಸಿದೆ. ರತೀಶ್ ಹಾಗೂ ಜಬ್ಬಾರ್ನನ್ನು ಶೀಘ್ರದಲ್ಲಿ ಸೆರೆಹಿಡಿಯಲು ಸಾಧ್ಯವಿದೆಯೆಂಬ ನಿರೀಕ್ಷೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈಮಧ್ಯೆ ಸಹಕಾರಿ ಸಂಸ್ಥೆದಿAದ ಹಣ ಲಪಟಾಯಿಸಿದ ಪ್ರಕರಣದಲ್ಲಿ ಸೆರೆಗೀಡಾದ ಪಳ್ಳಿಕ್ಕೆರೆ ಪಂಚಾಯತ್ ಸದಸ್ಯನೂ, ಪ್ರಾದೇಶಿಕ ಮುಸ್ಲಿಂ ಲೀಗ್ ನೇತಾರನಾದ ಬೇಕಲ ಹದ್ದಾದನಗರದ ಕೆ. ಅಹಮ್ಮದ್ ಬಷೀರ್ (60), ಈತನ ಚಾಲಕ ಅಂಬಲತ್ತರ ಪರಕ್ಕ ಳಾಯಿ ಏಳನೇ ಮೈಲಿನ ಎ. ಅಬ್ದುಲ್ ಗಫೂರ್ (26), ಕಾಞಂಗಾಡ್ ನೆಲ್ಲಿ ಕ್ಕಾಡ್ ನಿವಾಸಿಯೂ, ಜಿಮ್ನೇಶಿಯಂ ಸಂಸ್ಥೆಯ ಮಾಲಕನಾದ ಎ. ಅನಿಲ್ ಕುಮಾರ್ (55) ಎಂಬಿವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಈ ಮೂರು ಮಂದಿಯನ್ನು ಬೆಂಗಳೂ ರಿನಲ್ಲಿ ಆದೂರು ಇನ್ಸ್ಪೆಕ್ಟರ್ ಪಿ.ಸಿ. ಸಂಜಯ್ ಕುಮಾರ್ ನೇತೃತ್ವದ ತಂಡ ಬಂಧಿಸಿತ್ತು.
ಸೊಸೈಟಿಯಿಂದ ರತೀಶ್ ಲಪಟಾಯಿಸಿದ ಮೊತ್ತದಿಂದ 44 ಲಕ್ಷ ರೂಪಾಯಿ ಅಹಮ್ಮದ್ ಬಷೀರ್ನ ಬ್ಯಾಂಕ್ ಖಾತೆಗೆ ತಲುಪಿರುವುದನ್ನು ಪೊಲೀಸರು ದೃಢೀಕರಿಸಿದ್ದಾರೆ. ರಜೆಯಲ್ಲಿದ್ದಾಗ ಮೇ 9ರಂದು ರತೀಶ್ ಸೊಸೈಟಿಯ ಕಚೇರಿಗೆ ತಲುಪಿ ಲಾಕರ್ ತೆರೆದು ಕೊಂಡೊಯ್ದ ಅಡವು ಚಿನ್ನವನ್ನು ಕೇರಳ ಬ್ಯಾಂಕ್ನ ಪೆರಿಯ, ಕಾಞಂ ಗಾಡ್ ಶಾಖೆಗಳಲ್ಲಿ ಅಡವಿರಿಸಿರು ವುದು ಅಬ್ದುಲ್ ಗಫೂರ್ ಹಾಗೂ ಅನಿಲ್ ಕುಮಾರ್ರ ಹೆಸರಲ್ಲಾಗಿದೆ. ಆ ಮೂಲಕ ಲಭಿಸಿದ ಮೊತ್ತವನ್ನು ರತೀಶ್ಗೆ ನೀಡಿದ್ದೇವಂದು ಬಂಧಿತರಾದವರು ಹೇಳಿಕೆ ನೀಡಿದ್ದಾರೆ. ಇದೇ ವೇಳೆ ವಂಚನೆ ನಡೆಸಿದ ವತಿಯಿಂದ ಲಭಿಸಿದ ಹಣವನ್ನು ಬಳಸಿ ಕಣ್ಣೂರು ನಿವಾಸಿ ಯಾದ ಜಬ್ಬಾರ್ನ ಹೆಸರಲ್ಲಿ ಆಸ್ತಿ ಖರೀದಿಸಿರುವುದಾಗಿಯೂ ಸಂಶಯಿ ಸಲಾಗಿದೆ. ವಂಚನೆ ತಂಡದ ಓರ್ವ ಎನ್ಐಎ ಅಧಿಕಾರಿಯೆಂದು ತಿಳಿಸಿ ಭಾರೀ ಮೊತ್ತವನ್ನು ಲಪಟಾ ಯಿಸಿರುವುದಾಗಿಯೂ ದೂರುಗಳು ಕೇಳಿಬಂದಿದೆ. ಜಿಲ್ಲೆಯ ವಿವಿಧ ಭಾಗಗಳಿಂದಾಗಿ ಹಲವು ಮಂದಿಯಿAದ ಕೋಟ್ಯಂತರ ರೂಪಾಯಿಗಳ ವಂಚನೆ ನಡೆಸಿರುವುದಾಗಿಯೂ ಸೂಚನೆಗಳಿವೆ.