ಕಾರವಾರದಲ್ಲಿ ಗುಡ್ಡೆ ಕುಸಿತ; 6 ಮಂದಿಯ ಮೃತದೇಹ ಪತ್ತೆ
ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗ್ರಾಮದ ಬಳಿ ಕಾರವಾರ- ಕುಮಟ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಭವಿಸಿದ ಗುಡ್ಡೆ ಕುಸಿತದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ ಸಾಧ್ಯತೆ ಬಗ್ಗೆ ಶಂಕೆ ಪಡಲಾಗಿದೆ. ಇವರಲ್ಲಿ ಆರು ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಉಳಿದವರಿಗಾಗಿ ಎನ್‌ಡಿಆರ್‌ಎಫ್ ಶೋಧ ಕಾರ್ಯ ಮುಂದುವರಿಸಿದೆ. ಮಣ್ಣಿನಡಿ ಸಿಲುಕಿ ಮೃತಪಟ್ಟವರಲ್ಲಿ ಐವರು ಒಂದೇ ಕುಟುಂಬದ ಸದಸ್ಯರು ಎನ್ನಲಾಗಿದ್ದು, ಇವರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೋಟೆಲ್ ನಡೆಸುತ್ತಿದ್ದ ವರೆಂದು ತಿಳಿದು ಬಂದಿದೆ.