ಕಾರಿನಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಬಂಧನ
ಕಾಸರಗೋಡು: ಶಿರಿಬಾಗಿಲು ಸಮೀಪದ ಮಾಯಿಪ್ಪಾಡಿಯಲ್ಲಿ ಕಾಸರಗೋಡು ಅಬಕಾರಿ ರೇಂಜ್ನ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಜೆಯವರ ನೇತೃತ್ವದ ತಂಡ ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಕಾರೊಂದರಿAದ ಮಾದಕ ವಸ್ತುವಾದ 2.419 ಗ್ರಾಂ ಎಂಡಿಎAಎ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬAಧಿಸಿ ನೆಕ್ರಾಜೆ, ಪೈಕ, ಬಾಲಡ್ಕ ನಿವಾಸಿ ಕೆ.ಪಿ. ಹೌಸ್ನ ಅಷ್ರೀನ್ ಅನ್ವಾಸ್ ಪಿ.ಎಂ.(32) ಹಾಗೂ ನೀರ್ಚಾಲ್ ಕನ್ಯಪ್ಪಾಡಿಯ ಕರಿಕಟ್ಟಪಳ್ಳ ಹೌಸ್ನ ಹಮೀರ್ ಎನ್(29) ಎಂಬವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.
ಕಾರನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ಗಳಾದ ರಂಜಿತ್ ಕೆ.ವಿ, ಮೊಹಮ್ಮದ್ ಕಬೀರ್ ಬಿ.ಎಸ್ (ಕೆಮು ಘಟಕ), ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಪ್ರಶಾಂತ್ ಕುಮಾರ್ ಎ.ವಿ, ಅಮಲ್ಜಿತ್ ಟಿ.ಸಿ, ನಿಖಿಲ್ ವಿ. ಮತ್ತು ಚಾಲಕ ಮೈಕಲ್ ಜೋಸೆಫ್ ಎಂಬವರು ಒಳಗೊಂಡಿದ್ದರು.