ಕಾರಿನಲ್ಲಿ ಸಾಗಿಸುತ್ತಿದ್ದ 29.3 ಕಿಲೋ ಗಾಂಜಾ ವಶ: ಓರ್ವ ಸೆರೆ; ಮೂವರು ಪರಾರಿ
ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 29.3 ಕಿಲೋ ಗಾಂಜಾವನ್ನು ಪೆರಿಯ ಬಳಿಯಿಂದ ಬೇಕಲ ಪೊಲೀಸರು ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಬೋವಿ ಕ್ಕಾನ ಪೊವ್ವಲ್ ನಿವಾಸಿ ಸುಲೈಮಾನ್ ಬಾಸಿತ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಜತೆ ಕಾರಿನಲ್ಲಿದ್ದ ಇತರ ಇಬ್ಬರು ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿ ದ್ದಾರೆ. ಮಾಲು ಸಾಗಿಸಲು ಬಳಸಿದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್‌ರ ನಿರ್ದೇಶ ಪ್ರಕಾರ ಬೇಕಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಪಿ. ಶೈನ್ ನೇತೃತ್ವದಲ್ಲಿ ಎಸ್‌ಐ ಬಾವ ಅಕ್ಕರಕ್ಕಾರನ್, ಪ್ರೊಬೆಷನಲ್ ಎಸ್‌ಐ ಅಜೆಯ್, ಸಿಪಿಒಗಳಾದ ವಿನೀಶ್ ಮತ್ತು ಸಾಜನ್ ಎಂಬವರನ್ನೊಳಗೊಂಡ ಪೊಲೀಸರ ತಂಡ ನಿನ್ನೆ ಪೆರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಆ ವೇಳೆ ಆ ದಾರಿಯಾಗಿ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪ ಡಿಸಿದಾಗ ಢಿಕ್ಕಿಯಲ್ಲಿ ತಲಾ ಎರಡು ಕಿಲೋ ದ 15 ಪ್ಯಾಕೆಟ್‌ಗಳಲ್ಲಿ ತುಂಬಿಸಿದ ಗಾಂಜಾ ಪತ್ತೆಯಾಗಿದೆ. ಆ ಕಾರಿನಲ್ಲಿ ಮೂವರಿದ್ದರೆಂದೂ ಅದರಲ್ಲಿ ಇಬ್ಬರು ತಪ್ಪಿಸಿ ಪರಾರಿ ಯಾಗಿದ್ದಾರೆಂದೂ ಪೊಲೀಸರು ತಿಳಿಸಿದ್ದಾರೆ.
ಮಾರಾಟಕ್ಕಾಗಿ ತಂದ 60 ಗ್ರಾಂ ಗಾಂಜಾ ವಶ; ಓರ್ವ ಸೆರೆ
ಕಾಸರಗೋಡು: ಮಾರಾಟಕ್ಕೆ ತರಲಾದ 60 ಗ್ರಾಂ ಗಾಂಜಾ ಸಹಿತ ಯುವಕನನ್ನು ತಳಂಗರೆಯಿಂದ ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ತಳಂಗರೆ ನಿವಾಸಿ ಪೈಸಲ್ (32) ಬಂಧಿತ ಆರೋಪಿ. ಕಾಸರಗೋಡು ನಗರದಲ್ಲಿ ಗಾಂಜಾ ಮಾರಾಟ ದಂಧೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.