ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯ ವಶ: ಓರ್ವ ಸೆರೆ
ಕಾಸರಗೋಡು: ವಿದ್ಯಾನಗರ ಕೋಪ ರಸ್ತೆ ಬಳಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರ ವ್ಯವಾದ 0.703 ಗ್ರಾಂ ಮೆಥಾಫಿ ಟಾಮಿನ್ ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ.
ಇದಕ್ಕೆ ಸಂಬಂಧಿಸಿ ಬಂಬ್ರಾಣ ಗ್ರಾಮದ ಆರಿಕ್ಕಾಡಿ ಕೊಪ್ಪಳಂ ಕಲ್ಲಟ್ಟ ವೀಟಿಲ್‌ನ ಅಬ್ದುಲ್ ಅಸೀಸ್ ಎಂಬಾತನನ್ನು ಬಂಧಿಸಲಾಗಿದೆ. ಆತ ಬಂದಿದ್ದ ಕಾರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಹೆಚ್ಚುವರಿ ಹೊಣೆಗಾರಿಕೆ ಹೊಂದಿರುವ ಎಕ್ಸೈಸ್ ಇನ್‌ಸ್ಪೆಕ್ಟರ್ ಕೆ. ಜೋಸೆಫ್ ನೇತೃತ್ವದ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಎಇಐ (ಗ್ರೇಡ್) ಮುರಳಿ ಕೆ.ವಿ, ಪ್ರಿವೆಂಟೀವ್ ಆಫೀಸರ್ (ಗ್ರೇಡ್)ಗಳಾದ ಪಿ. ಪ್ರಶಾಂತ್ ಕುಮಾರ್, ಅಜೇಶ್ ಸಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥನ್ ಮತ್ತು ಸಜೀಶ್ ಪಿ (ಚಾಲಕ) ಎಂಬವರು ಒಳಗೊಂಡಿದ್ದರು.