ಕಾಸರಗೋಡು: ಮುಟ್ಟತ್ತೋಡಿ ಪನ್ನಿಪಾರೆಯಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಪಿನ್ ಯು.ಪಿ ಯವರ ನೇತೃತ್ವದ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯವಾದ 16.8 ಗ್ರಾಂ ಎಂಡಿಎಂಎ ಮತ್ತು 2.1 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಇದಕ್ಕೆ ಸಂಬಂಧಿಸಿ ಮೂಲತಃ ಕಾಸರಗೋಡು ಅಣಂಗೂರು ತುರ್ತಿ ಕೆ. ಕಪ್ಪಲ್ ಹೌಸ್‌ನ ನಿವಾಸಿ ಹಾಗೂ ಈಗ ಚೆಂಗಳ ಸಿಟಿಜನ್ ನಗರ ತೈವಳಪ್ಪಿನಲ್ಲಿ ವಾಸಿಸುತ್ತಿರುವ ಅಬೂಬಕ್ಕರ್ ಸಿದ್ದೀಕ್ ಟಿ.ಎಂ. (27) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಬಂಧಿತನನ್ನು ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಬಂಧಿತನ ವಿರುದ್ಧ ಇಂತಹ ಕೇಸು ಬೇರೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆಯಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀ ಸರ್‌ಗಳಾದ ಪ್ರದೀಪ್ ನಾರಾಯಣನ್, ಪ್ರಶಾಂತ್, ಚಾಲಕ ಮನೋಜ್ ಹಾಗೂ ಕಾಸರಗೋಡು ಜಿಲ್ಲಾ ಡಾನ್ಸ್ ತಂಡದ ಪೊಲೀಸರಾದ ರಜೀಶ್ ಮತ್ತು ನಿಜಿಲ್ ಎಂಬವರು ಒಳಗೊಂಡಿದ್ದರು.