ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶ: ಓರ್ವ ಸೆರೆ
ಉಪ್ಪಳ: ಕಾರಿನಲ್ಲಿ ಬಚ್ಚಿಟ್ಟಿದ್ದ 4.27 ಗ್ರಾಂ ಎಂಡಿಎಂಎಯನ್ನು ಪತ್ತೆಹಚ್ಚಿ ವಶಪಡಿಸಿಕೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಕೊಡ್ಲ ಮೊಗರು ಪಳ್ಳತ್ತುಪದವು ಜುಮೈಲ ಮಂಜಿಲ್‌ನ ಮೊಹಮ್ಮದ್ ಜಲಾಲ ದ್ದೀನ್ (24) ಎಂಬಾತನನ್ನು ಮಂಜೇಶ್ವರ ಎಸ್‌ಐ ಅಜಯ್ ಎಸ್ ಮೆನೋನ್ ಬಂಧಿಸಿದ್ದಾರೆ.
ನಿನ್ನೆ ಸಂಜೆ ಎಸ್‌ಐ ನೇತೃತ್ವದ ಪೊಲೀಸರು ಕಳಿಯೂರು ಬಳಿಯ ಉಜಿರೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತ್ತಿದ್ದ ವೇಳೆ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಹ್ಯಾಂಡ್ ಬ್ರೇಕ್ ಬಳಿ ಮಾದಕವಸ್ತು ಬಚ್ಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿ ಕಾರನ್ನು ವಶಪಡಿಸಲಾಗಿದೆ.
ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರು ಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.