ಕಾರಿನಲ್ಲಿ ಸಾಗಿಸುತ್ತಿದ್ದ ೮೪೧೨ ಪ್ಯಾಕೆಟ್ ಪಾನ್ ಮಸಾಲೆ ವಶ: ಓರ್ವ ಸೆರೆ
ಪೆರ್ಲ: ಕರ್ನಾಟಕದಿಂದ ಕಾರಿನಲ್ಲಿ ತರಲಾಗುತ್ತಿದ್ದ ಭಾರೀ ಪ್ರಮಾಣದ ಪಾನ್‌ಮಸಾಲೆಯನ್ನು ಅಡ್ಕಸ್ಥಳದಲ್ಲಿ ವಶಪಡಿಸಲಾಗಿದೆ. ಈ ಸಂಬಂಧ ಕಾರಿನಲ್ಲಿದ್ದ ಅರಿಯಪ್ಪಾಡಿ ಶೇಣಿಯ ಅಬ್ದುಲ್ ಜಾಬೀರ್ (೨೫) ಎಂಬಾತನನ್ನು ಬಂಧಿಸಲಾಗಿದೆ. ಕಾರಿನಲ್ಲಿ ಮೂರು ಗೋಣಿಚೀಲಗಳಲ್ಲಿ ತುಂಬಿಸಿಟ್ಟಿದ್ದ ೮೪೧೨ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ. ನಿನ್ನೆ ಸಂಜೆ ಅಡ್ಕಸ್ಥಳದಲ್ಲಿ ಚುನಾವಣೆ ಸಂಬಂಧ ಕರ್ತವ್ಯನಿರತರಾಗಿದ್ದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕ ಭಾಗದಿಂದ ಬರುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಪಾನ್ ಮಸಾಲೆ ಪತ್ತೆಯಾಗಿದೆ. ಬಳಿಕ ಕಾರು ಹಾಗೂ ಅದರಲ್ಲಿದ್ದ ಅಬ್ದುಲ್ ಜಾಬೀರ್‌ನನ್ನು ಕಸ್ಟಡಿಗೆ ತೆಗೆದು ಬದಿಯಡ್ಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಅಬ್ದುಲ್ ಜಾಬೀರ್‌ನನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.