ಕಾರಿನೊಳಗೆ ಸುಟ್ಟು ಕರಕಲಾದ ಮೃತದೇಹ ಪತ್ತೆ
ಕೊಲ್ಲಂ: ಹೊಂಡಕ್ಕೆ ಮಗುಚಿ ಬಿದ್ದ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲ್ಲಂ ಸಮೀಪ ಅಂಜಲ್ ಒಳುಗುಪಾರಯ್ಕಲ್‌ನಲ್ಲಿ ಇಂದು ಬೆಳಿಗ್ಗೆ ಈ ಘಟನೆ ಅರಿವಿಗೆ ಬಂದಿದೆ. ಕಾರು ಕೂಡಾ ಉರಿದ ಸ್ಥಿತಿಯಲ್ಲಿದೆ. ಅಂಜಲ್ ಒಳುಗುಪಾರಯ್ಕಲನ ಲನೀಶ್ ರೋಬಿನ್ಸ್ ಎಂಬಾತ ಸಾವಿಗೀಡಾದ ವ್ಯಕ್ತಿಯೆಂದು ಗುರುತುಹಚ್ಚಲಾಗಿದೆ. ನಿನ್ನೆ ರಾತ್ರಿ ಕಾರು ಅಪಘಾತಕ್ಕೀ ಡಾಗಿರಬಹುದೆಂದು ಅಂದಾಜಿಸಲಾಗಿದೆ.