ಕಾರುಗಳಲ್ಲಿ ಸಾಗಿಸುತ್ತಿದ್ದ 123 ಕಿಲೋ ಗಾಂಜಾ ವಶ: ದೇಲಂಪಾಡಿ ನಿವಾಸಿಗಳಾದ ಮೂವರ ಸೆರೆ
ಕಾಸರಗೋಡು: ಆಂಧ್ರಪ್ರದೇಶ ದಿಂದ ಕಾರುಗಳಲ್ಲಿ ಕಾಸರಗೋಡು ಭಾಗಕ್ಕೆ ಸಾಗಿಸುತ್ತಿದ್ದ 123 ಕಿಲೋ ಗಾಂಜಾವನ್ನು ಕರ್ನಾಟಕ ಪೊಲೀಸರು ವಶಪಡಿಸಿಕೊಂಡು ಈ ಸಂಬಂಧ ದೇಲಂಪಾಡಿ ನಿವಾಸಿಗಳಾದ ಮೂವರನ್ನು ಬಂಧಿಸಿದ್ದಾರೆ.
ದೇಲಂಪಾಡಿ ಅಡೂರು ಉರ್ಡೂರಿನ ಎಂ.ಕೆ. ಮಸೂದ್ (45), ದೇಲಂಪಾಡಿ ಚಂದಮೂ ಲೆಯ ಮುಹಮ್ಮದ್ ಆಶಿಕ್ (24), ದೇಲಂಪಾಡಿಯ ಸುಬೈರ್ (30) ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆ. ಮೊನ್ನೆ ಸಂಜೆ ಮೂಡಬಿದ್ರೆ ಸಮೀಪದ ಕಾಂತಾವರದಲ್ಲಿ ಮಂಗಳೂರು ಸಿಟಿ ಕ್ರೈಂ ಬ್ರಾಂಚ್ ನಡೆಸಿದ ವಾಹನ ತಪಾಸಣೆ ವೇಳೆ ಗಾಂಜಾ ಸಾಗಾಟ ಪತ್ತೆಹಚ್ಚಲಾಗಿದೆ. ಪೊಲೀಸರು ಕಾರುಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಇದಕ್ಕೆ ಸುಮಾರು 42 ಲಕ್ಷ ರೂಪಾಯಿ ಮೌಲ್ಯ ಅಂದಾಜಿ ಸಲಾಗಿದೆ. ಗಾಂಜಾ ಸಾಗಿಸುತ್ತಿದ್ದ 2 ಕಾರುಗಳು ಹಾಗೂ ಆರೋಪಿಗಳ ೫ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಕ್ರೈಂ ಬ್ರಾಂಚ್ ತಂಡ ದೇಲಂಪಾಡಿಗೆ ತಲುಪಿ ಆರೋಪಿಗಳ ಮನೆಗಳಲ್ಲಿ ತಪಾಸಣೆ ನಡೆಸಿದೆ.