ಕಾಸರಗೋಡು: ಬಡ ರೋಗಿಗಳಿಗೆ ಚಿಕಿತ್ಸಾ ನೆರವು ನೀಡುವ ಕಾರುಣ್ಯ ಬೆನವಲೆಂಟ್ ಫಂಡ್ (ಕೆಬಿಎಫ್) ಯೋಜನೆಯ ಅವಧಿಯನ್ನು ರಾಜ್ಯ ಸರಕಾರ ಜೂನ್ 30ರ ತನಕ ವಿಸ್ತರಿಸಿದೆ.
ಪ್ರಸ್ತುತ ಯೋಜನೆಯ ಅವಧಿ ಮಾರ್ಚ್ 30ರಂದು ಕೊನೆಗೊಂಡಿತ್ತು. ಆ ಕಾರಣದಿಂದಾಗಿ ಹಲವು ಆಸ್ಪತ್ರೆಗಳು ಕಾರುಣ್ಯ ಯೋಜನೆ ಪ್ರಕಾರವಿರುವ ಚಿಕಿತ್ಸೆಯನ್ನು ನಿಲ್ಲಿಸಿದ್ದವು. ವರ್ಷಕ್ಕೆ ಮೂರು ಲಕ್ಷ ರೂ.ಗಿಂತ ಕೆಳಗೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳಿಗೆ ಕಾರುಣ್ಯ ಯೋಜನೆ ಪ್ರಕಾರ ಚಿಕಿತ್ಸಾ ಧನ ಸಹಾಯ ಲಭಿಸುತ್ತಿದೆ. ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಸದಸ್ಯ ರಾಗದವರಿಗೆ ಕಾರುಣ್ಯ ಲಾಟರಿಯಿಂದ ಲಭಿಸುವ ಆದಾಯ ಉಪಯೋಗಿಸಿ ಜ್ಯಾರಿಗೊಳಿಸಲಾಗಿ ರುವ ಕೆಬಿಎಫ್ ಯೋಜನೆಯ ಪ್ರಯೋಜನ ಲಭಿಸಲಿದೆ.