ಕುಂಬಳೆ: ಇಲ್ಲಿನ ಭಾಸ್ಕರನಗರದಲ್ಲಿ ನಿಯಂತ್ರಣ ತಪ್ಪಿದ ಕಾರು ಚರಂಡಿಯ ಗೋಡೆಗೆ ಢಿಕ್ಕಿ ಹೊಡೆದಿದ್ದು, ಚಾಲಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಮೊನ್ನೆ ಸಂಜೆ5 ಗಂಟೆಗೆ ಬದಿಯಡ್ಕದಿಂದ ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಮುಂದೆ ಸಂಚರಿಸುತ್ತಿದ್ದ ಬೈಕ್ ದಿಢೀರ್ ಅಡ್ಡ ಬಂದಾಗ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಕಾರು ನಿಯಂತ್ರಣ ತಪ್ಪಿ ಗೋಡೆಗೆ ಬಡಿದಿದೆ. ಬದಿಯಡ್ಕ ಮಾವಿನಕಟ್ಟೆ ನಿವಾಸಿಯ ಕಾರು ಇದಾಗಿದ್ದು, ಅಪಘಾತದಿಂದ ಪೂರ್ಣವಾಗಿ ಹಾನಿಗೊಂಡಿದೆ.
ಕಳೆದ ಆರು ತಿಂಗಳಿಂದ ಭಾಸ್ಕರನಗರದಲ್ಲಿ ಹಲವು ವಾಹನಗಳು ಅಪಘಾತಕ್ಕೀಡಾಗಿದ್ದು, ಇದರಿಂದ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.