ಕಾರು ಮಗುಚಿ ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣ :ಕ್ರೈಂ ಬ್ರಾಂಚ್‌ನಿಂದ ಪೊಲೀಸರಿಗೆ ಕ್ಲೀನ್ ಚಿಟ್
ಕಾಸರಗೋಡು: ಪೊಲೀಸರು ಹಿಂಬಾಲಿಸುತ್ತಿದ್ದ ಮಧ್ಯೆ ಕಾರು ಮಗುಚಿ ಬಿದ್ದು ಅಂಗಡಿಮೊಗರು ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿ ಮೊಹಮ್ಮದ್ ಫರ್ಹಾಸ್ (೧೭) ಸಾವನ್ನಪ್ಪಿದ ಘಟನೆಯಲ್ಲಿ ಪೊಲೀಸರ ವತಿಯಂದ ಯಾವುದೇ ರೀತಿಯ ಲೋಪದೋ ಷಗಳು ಉಂಟಾಗಿಲ್ಲ ವೆಂದು ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಕ್ರೈಂ ಬ್ರಾಂಚ್ ತಂಡ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗೆ ಸಲ್ಲಿಸಿದ ಪ್ರಾಥ ಮಿಕ ತನಿಖಾ ವರದಿಯಲ್ಲಿ ತಿಳಿಸಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ಕುಟುಂಬ ನೀಡಿದ ದೂರು ಮತ್ತು ಅಪಘಾತಕ್ಕೀಡಾದ ಕಾರಿನಲ್ಲಿದ್ದ ಇತರ ವಿದ್ಯಾರ್ಥಿಗಳು ನೀಡಿದ ಹೇಳಿಕೆಗಳು ಪರಸ್ಪರ ಭಿನ್ನತೆ ಹೊಂದಿದೆ. ಅಪಘಾತಕ್ಕೊಳಗಾದ ಕಾರು ಪೂರ್ಣವಾಗಿ ಫಿಟ್ನೆಸ್ ಹೊಂದಿಲ್ಲವೆಂದು ಕ್ರೈಂ ಬ್ರಾಂಚ್ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಪೊಲೀಸರ ಭಾಗದಿಂದ ಯಾವುದೇ ರೀತಿಯ ಅನುಚಿತ ವರ್ತನೆಗಳು ಉಂಟಾಗಿಲ್ಲ. ಅಪಘಾತಕ್ಕೀಡಾದ ಕಾರಿ ನಲ್ಲಿ ವಿದ್ಯಾರ್ಥಿಗಳಿದ್ದರು ಎಂಬುವುದು ಆ ಕಾರು ಅಪಘಾತಕ್ಕೀಡಾದ ಬಳಿಕ ವಷ್ಟೇ ನಮಗೆ ಗೊತ್ತಾಯಿತೆಂದು ಪೊಲೀ ಸರು ಹೇಳಿಕೆ ನೀಡಿದ್ದಾರೆ. ಈ ಪ್ರಕರಣದ ತನಿಖೆ ಇನ್ನೂ ಮುಂದುವರಿಯುತ್ತಿದೆ ಎಂದು ಕ್ರೈಂ ಬ್ರಾಂಚ್ ವರದಿಯಲ್ಲಿ ತಿಳಿಸಿದೆ.
ಇದೇ ಸಂದರ್ಭದಲ್ಲಿ ಅಪಘಾತದ ಬಗ್ಗೆ ವಿಶೇಷ ತಂಡದಿಂದ ತನಿಖೆ ನಡೆಸ ಬೇಕೆಂದು ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ಕುಟುಂಬದವರು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಿದ್ದು, ಅದನ್ನು ತನಿಖೆ ವೇಳೆ ಪರಿಗಣಿ ಸಲಾಗಿಲ್ಲವೆಂದು ಬಾಲಕನ ಕುಟುಂಬ ದವರಿಂದ ಆಕ್ಷೇಪವೂ ಉಂಟಾಗಿದೆ.
ಅಗೋಸ್ತ್ ೨೪ರಂದು ಅಂಗಡಿ ಮೊಗರಿನಲ್ಲಿ ಪೊಲೀಸರು ವಾಹನ ತಪಾಸಣೆಯಲ್ಲ್ಲಿ ನಿರತರಾಗಿದ್ದ ವೇಳೆ ಆ ದಾರಿಯಾಗಿ ಬಂದ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಕಾರು ನಿಲ್ಲದೆ ಮುಂದಕ್ಕೆ ಸಾಗಿದಾಗ ಕುಂಬಳೆ ಪೊಲೀಸರು ಅದನ್ನು ತಕ್ಷಣ ತಮ್ಮ ವಾಹನದಲ್ಲಿ ಹಿಂಬಾಲಿಸಿದ್ದರು. ಅದುವೇ ಕಾರು ಅಪಘಾತಕ್ಕೀಡಾಗಲು ಕಾರಣವೆಂದು ಆರೋಪಿಸಲಾಗಿದೆ. ಅದಕ್ಕೆ ಸಂಬಂಧಿಸಿ ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ಮನೆಯವರು ಕಾರಿನಲ್ಲಿ ಸಂಚರಿಸುತ್ತಿದ್ದ ಇತರ ವಿದ್ಯಾರ್ಥಿಗಳು ಮತ್ತು ಅಪಘಾತ ನಡೆದ ಪರಿಸರದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವವರ ಹೇಳಿಕೆಗಳನ್ನು ಕ್ರೈಂ ಬ್ರಾಂಚ್ ತನಿಖೆ ವೇಳೆ ದಾಖಲಿಸಿ ಕೊಂಡಿತ್ತು. ಆ ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಸೇರಿದಂತೆ ಮೂವರು ಪೊಲೀಸರನ್ನು ಬಳಿಕ ಅಲ್ಲಿಂದ ಬೇರೆಡೆ ವರ್ಗಾಯಿಸಲಾಗಿತ್ತು.