ಕಾರು-ಮಿನಿ ಟಿಪ್ಪರ್ ಢಿಕ್ಕಿ: ಚಾಲಕ ಮೃತ್ಯು
ವಿಟ್ಲ: ಮಿನಿ ಟಿಪ್ಪರ್ ಹಾಗೂ ಕಾರು ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಸಂಭವಿಸಿದೆ. ಕಾರು ಚಾಲಕ ಅನಂತಾಡಿ ನಿವಾಸಿ ಅನೀಶ್ 34) ಮೃತಪಟ್ಟವರು. ಕಾರಿನಲ್ಲಿದ್ದ ಅನೀಶ್‌ರ ಸಹೋದರಿ ಹಾಗೂ ಮಗು ಗಂಭೀರಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ವೀರಕಂಬ ಕೆಲಿಂಜದಲ್ಲಿ ಘಟನೆ ನಡೆದಿದೆ. ಕಲ್ಲಡ್ಕದಿಂದ ವಿಟ್ಲ ಭಾಗಕ್ಕೆ ಬರುತ್ತಿದ್ದ ಕಾರು ಹಾಗೂ ಎದುರು ಭಾಗದಿಂದಬರುತ್ತಿದ್ದ ಮಿನಿ ಟಿಪ್ಪರ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.