ಕಾರು, ರಿಕ್ಷಾದಲ್ಲಿ ಸಾಗಿಸುತ್ತಿದ್ದ 453 ಲೀಟರ್ ಮದ್ಯ ವಶ: ಓರ್ವಸೆರೆ; ಇನ್ನೋರ್ವ ಪರಾರಿ
ಕಾಸರಗೋಡು: ನಗರದ ಅಡ್ಕತ್ತಬೈಲ್‌ನಲ್ಲಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರ ಣೆಯಲ್ಲಿ ಮಾರುತಿ ಸ್ವಿಫ್ಟ್ ಕಾರು ಮತ್ತು ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೪೫೩.೬ ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಂಜೇಶ್ವರ ಸಮೀಪದ ಕುಂಜತ್ತೂರಿನ ಅಣ್ಣು ಅಲಿಯಾಸ್ ಅರವಿಂದಾಕ್ಷನ್ (48) ಮತ್ತು ಕೂಡ್ಲು ರಾಮದಾಸನಗರದ ಪುರುಷೋತ್ತಮನ್ (31) ಎಂಬಿಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಪೈಕಿ ಎರಡನೇ ಆರೋಪಿ ಪುರುಷೋ ತ್ತಮನ್‌ನನ್ನು ಬಂಧಿಸಿದ್ದು, ಒಂದನೇ ಆರೋಪಿ ಪರಾರಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಆರೋಪಿ ಮತ್ತು ವಶಪಡಿಸಲಾದ ಮಾಲು ಮತ್ತು ವಾಹನಗಳನ್ನು ನಂತರ ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ ಪೈಕಿ ಅರವಿಂದಾಕ್ಷನ್‌ಗೆ ಸ್ಪಿರಿಟ್ ಸಾಗಾಟ, ಕರ್ನಾಟಕ ಮತ್ತು ಗೋವಾ ಮದ್ಯ ಸಾಗಾಟ ಪ್ರಕರ ಣಗಳಲ್ಲೂ ಆರೋಪಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ಪ್ರದೇಶವಾದ ತಲಪ್ಪಾಡಿಯನ್ನು ಕೇಂದ್ರೀಕರಿಸಿ ಅಕ್ರಮ ಮದ್ಯ ಸಾಗಾಟ ತಂಡ ಕಾರ್ಯವೆಸಗುತ್ತಿದೆಯೆಂದೂ ಅದರ ಮೇಲೆ ನಾವು ತಿಂಗಳುಗಳಿಂದ ತೀವ್ರ ನಿಗಾ ಇರಿಸುತ್ತಿದ್ದು ಅದರಿಂದ ಲಭಿಸಿದ ಮಾಹಿತಿಯಂತೆ ನಿನ್ನೆ ಈ ಕಾರ್ಯಾಚರಣೆ ನಡೆಸಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚgಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಪ್ರಮೋದ್ ಕುಮಾರ್ ವಿ, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಅಜೀಶ್ ಸಿ, ಸಿವಿಲ್ ಎಕ್ಸೈಸ್ ಅಫೀಸರ್‌ಗಳಾದ ಮಂಜುನಾಥನ್ ವಿ, ರಾಜೇಶ್ ಎಂ, ಶಿಜಿತ್ ವಿ ಮತ್ತು ಅತುಲ್ ಟಿ.ವಿ ಎಂಬವರು ಒಳಗೊಂಡಿದ್ದರು.