ಕಾರ್ಯಾಚರಿಸುತ್ತಿದ್ದ ಮಿಕ್ಸಿಯಿಂದ ಬೆಂಕಿ ಆಕಸ್ಮಿಕ: ತಪ್ಪಿದ ಭಾರೀ ದುರಂತ
ಉಪಳ: ಫ್ಲಾಟ್ನಲ್ಲಿ ಕಾರ್ಯಾ ಚರಿಸುತ್ತಿದ್ದ ಮಿಕ್ಸಿ ಬೆಂಕಿಗಾಹುತಿ ಯಾಗಿದ್ದು, ಕೂಡಲೇ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿ ಅಪಾಯ ತಪ್ಪಿಸಿದೆ.
ಉಪ್ಪಳ ಪತ್ವಾಡಿ ರಸ್ತೆಯ ಅಲ್ಫಾ ವಿಲ್ಲೇಜ್ ಫ್ಲಾಟ್ನಲ್ಲಿ ಪರ್ಸಾನ ಎಂಬವರು ವಾಸಿಸುವ ಮನೆಯಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಪರ್ಸಾನ ಮಿಕ್ಸ್ ಕಾರ್ಯಾಚರಿ ಸಲಿರಿಸಿ ಹೊರಗೆ ತೆರಳಿದ್ದರು. ಅಲ್ಪ ಹೊತ್ತಿನಲ್ಲಿ ಅವರು ಮರಳಿದ್ದು ಅಷರಲ್ಲಿ ಮಿಕ್ಸಿ ಉರಿದು ಕೊಠಡಿ ಪೂರ್ತಿ ಹೊಗೆ ತುಂಬಿ ಕೊಂಡಿತ್ತು. ಈ ಬಗ್ಗೆ ಮಾಹಿತಿ ಲಭಿಸಿದ ಉಪ್ಪಳ ಅಗ್ನಿಶಾಮಕ ದಳದ ಸ್ಟೇಶನ್ ಆಫೀಸರ್ ರಾಜೀವನ್ ನೇತೃತ್ವದ ಸಿಬ್ಬಂದಿಗಳು ತಲುಪಿ ಬೆಂಕಿ ನಂದಿಸಿದ್ದಾರೆ. ಅದೇ ಕೊಠಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ಗಳಿದ್ದು, ಅವುಗಳನ್ನು ಕೂಡಲೇ ತೆರವು ಗೊಳಿಸಿದುದರಿಂದ ಸಂಭವನೀಯ ಭಾರೀ ಅಪಾಯವನ್ನು ತಪ್ಪಿಸಲು ಸಾಧ್ಯವಾಯಿತು.