ಕಾಲುವೆಗೆ ತ್ಯಾಜ್ಯ ಎಸೆದ ಗಾಯಕ ಎಂ.ಜಿ. ಶ್ರೀಕುಮಾರ್‌ಗೆ 25,000 ರೂ. ದಂಡ: ಮಾಹಿತಿ ನೀಡಿದ ವ್ಯಕ್ತಿಗೆ ಬಹುಮಾನ
ಕೊಚ್ಚಿ: ನೀರು ಹರಿಯುವ ಕಾಲುವೆಗೆ ತ್ಯಾಜ್ಯ ಎಸೆದ ಸಿನಿಮಾ ಹಿನ್ನೆಲೆಗಾಯಕ ಎಂ.ಜಿ. ಶ್ರೀಕುಮಾರ್ ವಿರುದ್ಧ ದಂಡ ಹೇರಲಾಗಿದೆ. ಕೊಚ್ಚಿಯಲ್ಲಿ ಕಾಲುವೆಗೆ ತ್ಯಾಜ್ಯ ಎಸೆದ ಪ್ರಕರಣದಲ್ಲಿ ಮುಳುವಕಾಡ್ ಪಂಚಾಯತ್ ಅಧಿಕಾರಿಗಳು ಗಾಯಕನಿಗೆ 25,000 ರೂ. ದಂಡ ನೀಡಲು ನೋಟೀಸು ಕಳುಹಿಸಿದ್ದಾರೆ.
ನೋಟೀಸು ಲಭಿಸಿದ ಹಿನ್ನೆಲೆ ಯಲ್ಲಿ ನಿನ್ನೆ ಎಂ.ಜಿ. ಶ್ರೀಕುಮಾರ್ ದಂಡ ಪಾವತಿಸಿದ್ದಾರೆ. ಮುಳುವ ಕಾಡ್ನಲ್ಲಿರುವ ಮನೆಯೊಂದರಿAದ ತ್ಯಾಜ್ಯ ಬೀಳುತ್ತಿರುವುದನ್ನು ಓರ್ವ ಪ್ರವಾಸಿ ಮೊಬೈಲ್ನಲ್ಲಿ ಚಿತ್ರೀಕರಿ ಸಿದ್ದು, ಅದನ್ನು ಸಚಿವ ಎಂ.ಬಿ. ರಾಜೇಶ್ರಿಗೆ ಕಳುಹಿಸಿಕೊಟ್ಟಿದ್ದಾನೆ. ವೀಡಿಯೋ ಹಾಗೂ ದೃಶ್ಯ, ದಿವಸ, ಸಮಯ, ಸ್ಥಳವನ್ನು ಪರಿಶೀಲಿಸಿ ಪಂ ಚಾಯತ್ ಅಧಿಕಾರಿಗಳು ಕ್ರಮ ಕೈಗೊಂ ಡಿದ್ದಾರೆ. ಎಂ.ಜಿ. ಶ್ರೀಕುಮಾರ್ನ ಮನೆಯಿಂದ ತ್ಯಾಜ್ಯ ಎಸೆದಿರುವುದಾಗಿ ವೀಡಿಯೋದಲ್ಲಿ ಸ್ಪಷ್ಟವಾಗಿದ್ದರೂ ಯಾರು ಎಸೆದಿರುವುದೆಂದು ತಿಳಿಯಲು ಸಾಧ್ಯವಾಗಿರಲಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಿರುವುದಕ್ಕೆ ಸಂಬAಧಿಸಿ ದೂರು ನೀಡಲು 94466700800 ಎಂಬ ಸರಕಾರದ ವಾಟ್ಸಪ್ ನಂಬ್ರಕ್ಕೆ ಪುರಾವೆ ಸಹಿತ ದೂರು ನೀಡಿದರೆ ಕ್ರಮ ಉಂಟಾಗುವುದೆAದು ಸಚಿವರು ಈ ಮೊದಲೇ ತಿಳಿಸಿದ್ದರು. ದೂರು ಲಭಿಸಿದ ಹಿನ್ನೆಲೆಯಲ್ಲಿ ಸ್ಥಳೀಯಾ ಡಳಿತ ಇಲಾಖೆಯ ಕಂಟ್ರೋಲ್ ಕೊಠಡಿಯ ನಿರ್ದೇಶಾನುಸಾರ ಅಂದೇ ಪಂಚಾಯತ್ ಅಧಿಕಾರಿ ಗಳು ಸ್ಥಳಕ್ಕೆ ತಲುಪಿ ಪರಿಶೀಲಿಸಿ ಈ ವಿಷಯವನ್ನು ಖಚಿತಪಡಿಸಿದರು. ಬಳಿಕ ಪಂಚಾಯತ್ ರಾಜ್ ಆಕ್ಟ್ಗೆ ಸಂಬAಧಿಸಿ ದಂಡ ನೋಟೀಸು ನೀಡಲಾಗಿದೆ. ಜೊತೆಗೆ ಈ ಮಾಹಿತಿಯನ್ನು ನೀಡಿದ ವ್ಯಕ್ತಿಗೆ ಬಹುಮಾನವನ್ನು ಸಚಿವರು ಘೋಷಿಸಿದ್ದಾರೆ.