ಕಾಲು ಮುಟ್ಟಿ ವಂದಿಸಿ ಚಿನ್ನದ ಸರ ಎಗರಿಸಿದ ಆರೋಪಿಗಳ ಸೆರೆ

ಕಾಸರಗೋಡು: ಅನಾಥಾಲ ಯಕ್ಕೆ ದೇಣಿಗೆ ಹಾಗೂ ಉಡುಪು ಸಂಗ್ರಹಿಸುವ ನೆಪದಲ್ಲಿ ಮನೆಯೊಂ ದಕ್ಕೆ ಬಂದು ಮನೆಯೊಡತಿಯ ಕಾಲು ಮುಟ್ಟಿ ವಂದಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾದ ಪ್ರಕರಣದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ತೃಕ್ಕರಿಪುರ ಪೇಕಡತ್ತ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಕೆ. ಜಯರಾಜ್ (31) ಮತ್ತು ತಿರುವನಂತಪುರ ಕುಣಿಯಾಪುರದ ಪಿ. ನಾಗೇಶ್ (32) ಬಂಧಿತ ಆರೋಪಿಗಳು. ಅಕ್ಟೋಬರ್ 18ರಂದು ಆರೋಪಿಗಳಿಬ್ಬರು ಪಯ್ಯನ್ನೂರು ತೆಕ್ಕೇ ಬಜಾರ್‌ನ ಅಂಬಲತರ ರಸ್ತೆಯ ಎನ್. ತಂಗಮ್ಮ ಎಂಬವರ ಮನೆಗೆ ಬಂದು ಅನಾಥಾಲಯಕ್ಕೆ ದೇಣಿಗೆ ಹಾಗೂ ಉಡುಪು ನೀಡಬೇಕೆಂದು ಅವರೊಂದಿಗೆ ಕೇಳಿದ್ದರು, ಮಾತ್ರವಲ್ಲ ಅದರ ಹೆಸರಲ್ಲಿ ತಂಗಮ್ಮನವರ ಕಾಲುಮುಟ್ಟಿಕೊಂ ಡಿದ್ದರು. ಆಗ ಅವರಿಗೆ ಆಶೀರ್ವಾದ ನೀಡಲೆಂದು ತಂಗಮ್ಮ ಬಾಗಿದಾಗ  ಇಬ್ಬರ ಪೈಕಿ ಓರ್ವ ತಂಗಮ್ಮನವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದೆಳೆದ ಬಳಿಕ ಅವರಿಬ್ಬರು ಅಲ್ಲಿಂದ ಪರಾರಿಯಾಗಿದ್ದರು. ಅದಕ್ಕೆ ಸಂಬಂಧಿಸಿ ನೀಡಲಾದ ದೂರಿನಂತೆ ಪಯ್ಯನ್ನೂರು ಪೊಲೀಸರು ಪ್ರಕರಣ ದಾಖಲಿಸಿ ಕೊನೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಸೈಬರ್ ಸೆಲ್‌ನ ಸಹಾಯದಿಂದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.  ಆರೋಪಿಗಳು ಇದೇ ರೀತಿ ಈ ಹಿಂದೆಯೂ ತಂಗಮ್ಮನವರ ಮನೆಗೆ ಬಂದು ಅನಾಥಾಲಯಕ್ಕೆ ಬಟ್ಟೆ ಮತ್ತು ಹಣ ಎಗರಿಸಿದ್ದ್ದರೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page