ಕಾಲ್ಸಂಕ ಅಪಾಯ ಭೀತಿಯಲ್ಲಿ
ಮಧೂರು: ಮಧೂರು ಪಂಚಾಯತ್‌ನ ಐದನೇ ವಾರ್ಡ್‌ನಲ್ಲಿ ಚೇನಕ್ಕೋಡ್‌ನಿಂದ ಮಣಂಗಳಕ್ಕೆ ಸಾಗುವ ದಾರಿ ಮಧ್ಯೆ ಇರುವ ಕಾಲ್ಸಂಕ ಅಪಾಯಕಾರಿಯಾಗಿ ಪರಿಣಮಿಸಿದೆ. ವರ್ಷಗಳಿಂದ ಜೀರ್ಣಗೊಂಡಿರುವ ಈ ಕಾಲ್ಸಂಕದ ಅಡಿ ಭಾಗದಲ್ಲಿ ಕಲ್ಲು ಬಿರುಕು ಬಿಟ್ಟು ನಿಂತಿದೆ. ಮಳೆಗಾಲದಲ್ಲಿ ಈ ತೋಡಿನಲ್ಲಿ ನೀರು ತುಂಬಿ ಹರಿಯುತ್ತಿದ್ದು, ಈ ವೇಳೆ ಸಂಕ ಕುಸಿಯಲು ಸಾಧ್ಯವಿದೆ. ಶಾಲೆಯ ಮಕ್ಕಳು ಸಹಿತ ದಿನನಿತ್ಯವೂ ನೂರಾರು ಮಂದಿ ಈ ದಾರಿಯಾಗಿ ಸಂಚರಿಸುತ್ತಿದ್ದು, ಕಾಲ್ಸಂಕದಿಂದ ಭೀತಿ ಸೃಷ್ಟಿಯಾಗಿದೆ. ಈ ಸಂಕದ ದುಸ್ಥಿತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ವೆಂದೂ ಸ್ಥಳೀಯರು ದೂರಿದ್ದಾರೆ.