ಕಾಳಧನ ಶಂಕೆ : ೪.೬೮ ಲಕ್ಷ ರೂ. ವಶ ಓರ್ವ ಕಸ್ಟಡಿಗೆ
ಕಾಸರಗೋಡು: ಹೊಸ ದುರ್ಗ ಮಾಣಿಕ್ಕೋತ್‌ನಲ್ಲಿ ಹೊಸದುರ್ಗ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾಳಧನವೆಂದು ಶಂಕಿಸ ಲಾಗುತ್ತಿರುವ ೪.೬೮ ಲಕ್ಷ ರೂ.ವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾಸರಗೋಡು ಅಣಂಗೂರು ನಿವಾಸಿ ಬಿ.ಎಂ. ಇಬ್ರಾಹಿಂ (೪೮) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಈತ ಬೈಕ್‌ನಲ್ಲಿ ಹೊಸದುರ್ಗದಿಂದ ಕಾಸರಗೋಡಿಗೆ ಬರುತ್ತಿದ್ದ ದಾರಿ ಮಧ್ಯೆ ಮಾಣಿಕ್ಕೋತ್‌ನಲ್ಲಿ ಪೊಲೀಸರು ಆತನ ಬೈಕನ್ನು ತಡೆದು ನಿಲ್ಲಿಸಿ ತಪಾಸಣೆಗೊಳ ಪಡಿಸಿದಾಗ ಈ ಹಣ ಪತ್ತೆ ಯಾಗಿದೆ. ಸರಿಯಾದ ದಾಖಲು ಪತ್ರಗಳಿಲ್ಲದೆ ಈ ಹಣ ಸಾಗಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಆ ಹಣ ಮತ್ತು ಬೈಕ್ ಸಹಿತ ಇಬ್ರಾಹಿಂ ನನ್ನು ಕಸ್ಟಡಿಗೆ ತೆಗೆದುಕೊಳ್ಳ ಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.