ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರ ಶಿಲಾಮಯ ಗರ್ಭಗೃಹಕ್ಕೆ ಶಿಲಾನ್ಯಾಸ

ಕಾಸರಗೋಡು : ಕೂಡ್ಲು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನರ್ ನಿರ್ಮಾಣ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾದಿಗಳ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಶಿಲಾಮಯ ಗರ್ಭಗುಡಿಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಲಾನ್ಯಾಸ ನಡೆಸಿದರು. ತಂತ್ರಿ ಶ್ರೀ ಕೃಷ್ಣ ಗುರೂಜಿ ಕುಕ್ಕಾಜೆ, ಆಡಳಿತ ಮೊಕೆ್ತÃಸರ ಅಚ್ಯುತ ಕೆ., ಧರ್ಮದರ್ಶಿ ನಾರಾಯಣ ಪೂಜಾರಿ, ಜೀರ್ಣೋ ದ್ಧಾರ ಸಮಿತಿ ಪದಾಧಿಕಾರಿಗಳಾದ ಡಾ. ಅನಂತ ಕಾಮತ್, ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ, ಮೋಹನ್ ರಾಜ್ ಕಾಳ್ಯಂಗಾಡು, ಹರೀಶ್ ಕೊಳ್ಕೇಬೈಲು, ಶಾಂತಕುಮಾರ್ ಮುಂಡಿತ್ತಡ್ಕ ಮೊದಲಾದವರು ನೇತೃತ್ವ ವಹಿಸಿದ್ದರು.
ಈ ಸಂಬAಧ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದೆ. ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ ಗೌರವಾಧ್ಯಕ್ಷ, ಮೋಹನ್ ರಾಜ್ ಕಾಳ್ಯಂಗಾಡು ಅಧ್ಯಕ್ಷ, ಹರೀಶ್ ಕೊಳ್ಕೆಬೈಲು ಪ್ರಧಾನ ಕಾರ್ಯದರ್ಶಿ, ಶಾಂತಕುಮಾರ್ ಮುಂಡಿತ್ತಡ್ಕ ಕೋಶಾಧಿಕಾರಿಯಾಗಿರುವ ಸಮಿತಿ ಊರ ಹತ್ತು ಸಮಸ್ತರನ್ನು ಸೇರಿಸಿಕೊಂಡು ಅವಿರತ ದುಡಿಮೆ ನಡೆಸುತ್ತಿದೆ. ನೂರಾರು ಮಂದಿ ಕಾರ್ಯಕರ್ತರು ಈ ನಿಟ್ಟಿನಲ್ಲಿ ಅಹೋರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ.
ದೇವಾಲಯದ ಗರ್ಭಗುಡಿಯ ಪುನರ್ ನಿರ್ಮಾಣ, ನಾಗದೇವರ ಕಟ್ಟೆ ಪುನರ್ ನಿರ್ಮಾಣ, ಆಂಜನೇಯ ಮತ್ತು ವೀರಭದ್ರ ದೇವರ ಸ್ಥಾನಪಲ್ಲಟ ಮತ್ತು ಪುನರ್ ನಿರ್ಮಾಣ, ಕಲ್ಲÄರ್ಟಿ, ಗುಳಿ ಸನ್ನಿಧಿ ಪುನರ್ ನಿರ್ಮಾಣ, ನೂತನ ದರ್ಶನ ಮಂಟಪ ಸಹಿತ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಸುಮಾರು ಒಂದು ಕೋಟಿ ರೂ.ಗೂ ಅಧಿಕ ವೆಚ್ಚ ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಊರ-ಪರವೂರ ಭಗವದ್ಭಕ್ತರ ತನು-ಮನ-ಧನ ಸಹಾಯ, ಸಹಕಾರ ನಿರೀಕ್ಷಿ ಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

You cannot copy contents of this page