ಕಾಸರಗೋಡಿಗೆ ಮಾದಕವಸ್ತು ಸಾಗಿಸುತ್ತಿದ್ದ ಯುವಕ ಸೆರೆ : 738 ಗ್ರಾಂ ಹೈಡ್ರೋವೀಡ್ ಗಾಂಜಾ ಸಹಿತ ಕಾರು ವಶ
ಮಂಗಳೂರು: ಭಾರೀ ಪ್ರಮಾಣದ ಮಾದಕವಸ್ತುವನ್ನು ಕಾರಿನಲ್ಲಿ ಕಾಸರಗೋಡು ಭಾಗಕ್ಕೆ ಸಾಗಿಸುತ್ತಿದ್ದಾಗ ಕಲ್ಲಿಕೋಟೆ ನಿವಾಸಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಲ್ಲಿಕೋಟೆ ಉಣ್ಣಿಕುಳಂ ಕಂದಲಾಡ್ ಓರಾನ್‌ಕುನ್ನು ಎಂಬಲ್ಲಿನ ಶಮೀರ್ ಪಿ.ಕೆ (42) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನ ಕೈಯಿಂದ 738 ಗ್ರಾಂ ಹೈಡ್ರೋ ವೀಡ್ ಗಾಂಜಾ ವಶಪಡಿಸಲಾಗಿದೆ. ಇದಕ್ಕೆ ೭೩ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.
ಈತ ಗೋವಾದಿಂದ ಮಾದಕವಸ್ತುವನ್ನು ಕಾರಿನಲ್ಲಿ ಉಡುಪಿ ಮೂಲಕ ಕಾಸರಗೋಡಿಗೆ ತಲುಪಿಸಲು ಈತ ಯೋಚಿಸಿದ್ದನು. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ಮುಲ್ಕಿಯಲ್ಲಿ ಕಾರ್ಯಾಚರಣೆ ನಡೆಸಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಹೈಡ್ರೋವೀಡ್ ಗಾಂಜಾ ಪತ್ತೆಯಾಗಿದೆ. ಪೊಲೀಸ್ ಕಮಿಶನರ್ ಅನುಪವನ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಸಿಸಿಬಿ ಮನೋಜ್ ಕುಮಾರ್ ನೇತೃತ್ವದಲ್ಲಿ ನಡೆದ ಮಾದಕವಸ್ತು ಭೇಟೆ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್, ಪಿಎಸ್‌ಐ ಶರಣಪ್ಪ ಭಂಡಾರಿ ಮೊದಲಾದವರಿದ್ದರು. ಬಂಧಿತ ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ.