ಕಾಸರಗೋಡಿನಲ್ಲಿ ಇಂದು ಕನ್ನಡ ಪತ್ರಿಕಾ ದಿನಾಚರಣೆ

ಕಾಸರಗೋಡು: ನಗರದ ಕೋಟೆಕಣಿ ರಾಮನಗರ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನೇತೃತ್ವದಲ್ಲಿ ಇಂದು ಕನ್ನಡ ಪತ್ರಿಕಾ ದಿನಾಚರಿಸಲಾಗುವುದು.

ಸಂಜೆ 5 ಗಂಟೆಗೆ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ  ಕಾರ್ಯಕ್ರಮ ನಡೆಯಲಿದೆ. ಕ.ಸಾ.ಪ ಕೇರಳ ಗಡಿನಾಡು ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಶೋಕ ಕೆ ಕಾಸರಗೋಡು ಅವರಿಗೆ ಪತ್ರಿಕಾ ಗೌರವಾರ್ಪಣೆ ನಡೆಯಲಿದೆ. ಪತ್ರಕರ್ತ ರಾದ ಜಯ ಮಣಿಯಂಪಾರೆ, ವೀಜಿ ಕಾಸರಗೋಡು, ಜಯಶ್ರೀ ಆರ್ಯಾಪು ಮೊದಲಾದವರು ಉಪಸ್ಥಿತರಿರುವರು.

Leave a Reply

Your email address will not be published. Required fields are marked *

You cannot copy content of this page