ಕಾಸರಗೋಡಿನಲ್ಲಿ ಎನ್‌ಐಎ ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಪ್ರಕರಣದ ಆರೋಪಿ ಸೆರೆ
ಕಾಸರಗೋಡು: ಉಗ್ರಗಾಮಿ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆಮರೆಸಿಕೊಂಡು ಹೊಸದುರ್ಗ ಪಡನ್ನದ ಗುಪ್ತ ಕೇಂದ್ರವೊಂದರಲ್ಲಿ ವಾಸಿಸುತ್ತಿದ್ದ ಉಗ್ರಗಾಮಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಮುಂಜಾನೆ ನಡೆಸಿದ ಅತೀವ ಗುಪ್ತ ಕಾರ್ಯಾ ಚರಣೆಯಲ್ಲಿ ಬಂಧಿಸಿದೆ.
ಪಶ್ಚಿಮ ಬಂಗಾಲ ನಿವಾಸಿ ಎಂ.ಬಿ. ಶಾಬ್‌ಶೇಖ್ (32) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಈತ ಬಾಂಗ್ಲಾದೇಶದ ಪ್ರಜೆಯಾಗಿರುವ ಶಂಕೆಯನ್ನು ತನಿಖಾ ತಂಡ ವ್ಯಕ್ತಪಡಿಸಿದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿಬಂದು ಬಳಿಕ ತಾವು ಪಶ್ಚಿಮ ಬಂಗಾಲದವರೆಂದು ತಿಳಿಸಿ ಅದೆಷ್ಟೋ ಮಂದಿ ಭಾರತದ ವಿವಿಧ ರಾಜ್ಯಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಗ್ಗೆ ಎನ್‌ಐಎಗೆ ಸ್ಪಷ್ಟ ಮಾಹಿತಿ ಲಭಿಸಿದೆ. ಆದ್ದರಿಂದ ಇದೀಗ ಬಂಧಿತನಾದ ಶಾಬ್ ಶೇಖ್ ಕೂಡಾ ಬಾಂಗ್ಲಾ ದೇಶದವನಾಗಿರ ಬಹುದೇ ಎಂಬ ಬಗ್ಗೆ ತಿಳಿಯಲು ಆತನನ್ನು ತೀವ್ರ ವಿಚಾರಣೆಗೊಳಪಡಿ ಲಾಗುತ್ತಿದೆ.
ಬಂಧಿತ ಶಾಬ್ ಶೇಖ್ ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಉಗ್ರಗಾಮಿ ಪ್ರಕರಣವೊಂದರ ಆರೋಪಿಯಾಗಿದ್ದನು. ಆತನ ವಿರುದ್ದ ಯು.ಎ.ಪಿ.ಎ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಅದನ್ನು ತಿಳಿದ ಆತ ಅಸ್ಸಾಂನಿಂದ ತಪ್ಪಿಸಿಕೊಂಡು ಕೇರಳದ ಗುಪ್ತ ಕೇಂದ್ರವೊಂದರಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ತನಿಖಾ ತಂಡಕ್ಕೆ ಲಭಿಸಿತ್ತು. ಅದರಿಂದಾಗಿ ಆತನನ್ನು ಪತ್ತೆಹಚ್ಚಲು ಅಸ್ಸಾಂ ಪೊಲೀಸರು ಹಾಗೂ ಪ್ರಕರಣದ ವಿಶೇಷ ತನಿಖೆ ನಡೆಸುತ್ತಿರುವ ಎನ್‌ಐಎ ಕೂಡಾ ಲುಕೌಟ್ ನೋಟೀಸು ಜ್ಯಾರಿಗೊಳಿ ಸಿತ್ತು. ಇದರಂತೆ ತಿಂಗಳುಗಳ ತನಕ ನಡೆಸಲಾದ ತನಿಖೆಯಲ್ಲಿ ಆತ ಹೊಸದರ್ಗದ ಪಡನ್ನಕ್ಕಾಡಿನ ಗುಪ್ತ ಕೇಂದ್ರವೊಂದರಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿರುವ ಬಗ್ಗೆ ಮಾಹಿತಿ ಎನ್‌ಐಎಗೆ ಲಭಿಸಿತ್ತು. ಅದರ ಜಾಡು ಹಿಡಿದು ಎನ್‌ಐಎ ವಿಶೇಷ ತಂಡ ಪಡನ್ನಕ್ಕಾಡಿಗೆ ಆಗಮಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ.