ಕಾಸರಗೋಡಿನಲ್ಲಿ ಎ.ಟಿ.ಎಂ ದರೋಡೆಗೆ ಯತ್ನ: ಓರ್ವ ಕಸ್ಟಡಿಗೆ
ಕಾಸರಗೋಡು: ನಗರದಲ್ಲಿ ಎಟಿಎಂ ದರೋಡೆಗೆ ಯತ್ನ ನಡೆದಿದೆ. ನಗರದ ಎಂಜಿ ರಸ್ತೆ ಬಳಿ ಕಾರ್ಯವೆಸಗು ತ್ತಿರುವ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವನ್ನು ದರೋಡೆಗೈಯ್ಯುವ ಯತ್ನ ನಡೆಸಲಾಗಿದೆ. ವಿಷು ದಿನದಂದು ರಾತ್ರಿ ಸುಮಾರು 1.15 ಗಂಟೆ ವೇಳೆ ಈ ದರೋಡೆಯತ್ನ ನಡೆದಿದೆ. ಆದರೆ ಈ ಎಟಿಎಂನಿಂದ ಹಣ ನಷ್ಟಗೊಂಡಿಲ್ಲ ಮಾತ್ರವಲ್ಲ ಅದು ಈಗಲೂ ಸುರ ಕ್ಷಿತವಾಗಿ ಕಾರ್ಯವೆಸಗುತ್ತಿದೆಯೆಂದು ಪೊಲೀಸರು ತಿಳಿಸುತ್ತಿದ್ದಾರೆ. ಎಟಿಎಂನ ಹಣ ಇರಿಸಲಾಗಿದ್ದ ಬಾಗಿಲನ್ನು ಒಡೆಯಲು ಕಳ್ಳರು ಸತತ ಯತ್ನ ನಡೆಸಿದರೂ ಅದು ಸಫಲವಾಗದಾಗ ಅದನ್ನು ಅವರು ಅಲ್ಲಿಗೆ ಉಪೇಕ್ಷಿಸಿ ಪಲಾಯನಗೈದಿ ರುವುದಾಗಿ ಪೊಲೀಸರು ಸಂಶಯಿಸು ತ್ತಿದ್ದಾರೆ. ಇಂದು ಬೆಳಿಗ್ಗೆ ಅಧಿಕಾರಿ ಗಳು ಬ್ಯಾಂಕ್ ತೆರೆಯಲು ಬಂದಾಗಲಷ್ಟೇ ದರೋಡೆ ಯತ್ನ ಅವರ ಗಮನಕ್ಕೆ ಬಂದಿದೆ. ಅದರಂತೆ ಪ್ರಸ್ತುತ ಬ್ಯಾಂಕ್‌ನ ಅಸಿಸ್ಟೆಂಟ್ ಮೆನೇಜರ್ ಎ.ಕೆ. ಮಿಥಿಲ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಪೊಲೀಸರು ಓರ್ವನನ್ನು ಕಸ್ಟಡಿಗೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಕಾಸರಗೋಡು ಹಳೆ ಬಸ್ ನಿಲ್ದಾಣದ ವಾಹನ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಮೋಟಾರು ಬೈಕೊಂದು ಕಳವುಹೋಗಿದೆ. ಆ ಬಗ್ಗೆ ಆಲಂಪಾಡಿ ದಾರುಲ್ ನಜಾತಿಲ್‌ನ ನೌಶಾದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಆ ಬಗ್ಗೆಯೂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಬೈಕ್ ಕಳವಿಗೂ ಎಟಿಎಂ ದರೋಡೆಗೂ ಪರಸ್ಪರ ಸಂಬಂಧ ಹೊಂದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರಿಂದಾಗಿ ಕಸ್ಟಡಿಗೆ ತೆಗೆದುಕೊಳ್ಳಲಾದ ವ್ಯಕ್ತಿಯನ್ನು ಪೊಲೀಸರು ತೀವ್ರ ವಿಚಾರಣೆ ಗೊಳಪಡಿಸುತ್ತಿದ್ದಾರೆ.