ಕಾಸರಗೋಡಿನಲ್ಲಿ ಡಿಜಿಪಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ: ಮಾದಕವಸ್ತು, ಹೊಯ್ಗೆ ಮಾಫಿಯಾಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾಧ್ಯತೆ
ಕಾಸರಗೋಡು: ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿಜಿಪಿ ರವಾಡ ಚಂದ್ರಶೇಖರ್ ಇದೇ ಮೊದಲ ಬಾರಿಗೆ ಕಾಸರಗೋಡಿಗೆ ಆಗಮಿಸಿದ್ದಾರೆ. ನಿನ್ನೆ ಸಂಜೆ ತಲುಪಿದ ಅವರು ಪಿಲಿಕುಂಜೆಯ ಸರಕಾರಿ ಅತಿಥಿಗೃಹದಲ್ಲಿ ತಂಗಿದ್ದರು. ಇಂದು ಜಿಲ್ಲಾ ಪೊಲೀಸ್ ಕೇಂದ್ರದಲ್ಲಿ ಜಿಲ್ಲೆಯ ಡಿವೈಎಸ್ಪಿಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಜಿಪಿ ಪಾಲ್ಗೊಳ್ಳಲಿದ್ದಾರೆ. ತ್ರಿಸ್ತರ ಪಂಚಾಯತ್ ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿಜಿಪಿ ಸಲಹೆ ಸೂಚನೆ ನೀಡುವರೆಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ತೀವ್ರಗೊಂಡಿರುವ ಮಾದಕವಸ್ತು, ಹೊಯ್ಗೆ ಮಾಫಿಯಾಗಳಿಗೆ ಮಟ್ಟಾ ಹಾಕಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಡಿಜಿಪಿ ನಿರ್ದೇಶಿಸುವರೆಂದು ಸೂಚನೆಯಿದೆ. ಕುಂಬಳೆಯಲ್ಲಿ ಹೊಯ್ಗೆ ಮಾಫಿಯಾಗಳೊಂದಿಗೆ ನಂಟು ಹೊಂದಿದ್ದ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಿದ ಘಟನೆಯೂ ಡಿಜಿಪಿ ಭಾಗವಹಿಸಿದ ಸಭೆಯಲ್ಲಿ ಚರ್ಚೆ ಯಾಗಲಿದೆಯೆಂಬ ಸೂಚನೆಯಿದೆ.
ನಿನ್ನೆ ಕಣ್ಣೂರಿನಲ್ಲಿ ನಡೆದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಜಿಪಿ ಭಾರೀ ಅಸಮಾಧಾನ ವ್ಯಕ್ತಪ ಡಿಸಿದ್ದರು. ಟಿ.ಪಿ. ಚಂದ್ರಶೇ ಖರನ್ ಕೊಲೆ ಪ್ರಕರಣದ ಆರೋಪಿಗಳಿಗೆ ಮದ್ಯ ಸೇವಿಸಲು ಪೊಲೀಸರು ಸೌಕರ್ಯ ಒದಗಿಸಿ ದ್ದಾರೆಂಬ ಆರೋಪವುಂಟಾಗಿ ರುವುದು ಡಿಜಿಪಿಯ ಅಸಮಾಧಾ ನಕ್ಕೆ ಕಾರಣವಾಗಿದೆ. ಇಂತಹ ಘಟನೆಗಳು ಪುನರಾವರ್ತಿಸದಿರಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಡಿಜಿಪಿ ಸಭೆಯಲ್ಲಿ ನಿರ್ದೇಶಿಸಿದ್ದರು.